• Slide
    Slide
    Slide
    previous arrow
    next arrow
  • ಶಿರಸಿ KMF ವಿಭಾಗಕ್ಕೆ 2 ನೇ ಸುತ್ತಿನ ಕೊರೊನಾ ಲಸಿಕೆ ವಿತರಣೆ ಯಶಸ್ವಿ

    300x250 AD

    ಶಿರಸಿ: ಧಾರವಾಡ ಹಾಲು ಒಕ್ಕೂಟ ಹಾಗೂ ಕೆ.ಡಿ.ಸಿ.ಸಿ. ಬ್ಯಾಂಕ್ ಲಿ., ನಿರ್ದೇಶಕ ಸುರೇಶ್ಚಂದ್ರ ಹೆಗಡೆ ಕೆಶಿನ್ಮನೆ ಅವರ ಮಾರ್ಗದರ್ಶನದಂತೆ ಆ.26 ಗುರುವಾರ ಧಾರವಾಡ, ಹಾವೇರಿ, ಗದಗ ಮತ್ತು ಉತ್ತರಕನ್ನಡ ಜಿಲ್ಲಾ ಹಾಲು ಉತ್ಪಾದಕರ ಸಹಕಾರಿ ಸಂಘಗಳ ಒಕ್ಕೂಟ ನಿ., ಧಾರವಾಡದ ಶಿರಸಿ ಉಪವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿರುವ ಕಚೇರಿ ಹಾಗೂ ಶೀಥಲ ಕೇಂದ್ರದ ಸಿಬ್ಬಂದಿಗಳಿಗೆ, ತಾಲೂಕಿನ ಎಲ್ಲಾ ಹಾಲು ಉತ್ಪಾದಕರ ಸಹಕಾರಿ ಸಂಘಗಳ ಮುಖ್ಯಕಾರ್ಯನಿರ್ವಾಹಕರು, ಹಾಲು ಪರೀಕ್ಷಕರು, ಸಹಾಯಕರುಗಳಿಗೆ, ಕೃತಕ ಗರ್ಭಧಾರಣಾ ಕಾರ್ಯಕರ್ತರಿಗೆ, ಒಕ್ಕೂಟದ ನಂದಿನಿ ಉತ್ಪನ್ನಗಳ ವಿತರಕರಿಗೆ ಮತ್ತು ಹಾಲಿನ ಮಾರ್ಗದ ಚಾಲಕರುಗಳಿಗೆ 400 ಕೋವಿಡ್-19 2ನೇ ಸುತ್ತಿನ ಲಸಿಕೆಯನ್ನು ಧಾರವಾಡ ಹಾಲು ಒಕ್ಕೂಟದ ಶಿರಸಿ ಉಪವಿಭಾಗ ಅಗಸೇ ಬಾಗಿಲಿನಲ್ಲಿ ಯಶ್ವಸಿಯಾಗಿ ಉಚಿತವಾಗಿ ನೀಡಲಾಯಿತು.


    ಈ ಸಂದರ್ಭದಲ್ಲಿ ಮಾತನಾಡಿದ ನಿರ್ದೇಶಕ ಸುರೇಶ್ಚಂದ್ರ ಹೆಗಡೆ ಕೆಶಿನ್ಮನೆ ನಮ್ಮ ಎಲ್ಲ ಸಿಬ್ಬಂದಿಗಳು ಕೋವಿಡ್-19 ರ ಮಹಾಮಾರಿಯ ವಿರುದ್ದ ಹೋರಾಡುತ್ತಾನಿರಂತರವಾಗಿ ಅಗತ್ಯ ಸೇವೆಯ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಾ ಬಂದಿದ್ದು, ಅವರುಗಳ ಆರೋಗ್ಯದ ಜವಾಬ್ದಾರಿ ನನ್ನದಾಗಿದ್ದು, ಅದಕ್ಕಾಗಿ ಈ ಮೊದಲು ಕೋವಿಡ್-19 1ನೇ ಸುತ್ತಿನ ಲಸಿಕೆನ್ನು ವಿತರಿಸಲಾಗಿತ್ತು. ಅದರಂತೆಯೆ ಈಗ ಅವರೆಲ್ಲರೂ ಕೋವಿಡ್-19 2 ನೇ ಸುತ್ತಿನ ಲಸಿಕೆನ್ನು ಪಡೆಯಲು ಅರ್ಹರಾಗಿದ್ದು ಎಲ್ಲರಿಗೂ ಕೋವಿಡ್-19 2 ನೇ ಸುತ್ತಿನ ಲಸಿಕೆನ್ನು ಈಗ ನೀಡಲಾಗಿದೆ ಎಂದರು. ನಂತರ ಅನೇಕ ಸಾರ್ವಜನಿಕರಿಂದ ತಮಗೂ ಲಸಿಕೆ ನೀಡಬೇಕೆಂಬ ಮನವಿಗೆ ಸ್ಪಂದಿಸಿದ ನಿರ್ದೇಶಕರು ಒಕ್ಕೂಟದ ಎಲ್ಲ ಸಿಬ್ಬಂದಿಗಳಿಗೆ ಲಸಿಕೆ ನೀಡಲಾದ ನಂತರ ಸಾರ್ವಜನಿಕರಿಗೂ ಲಸಿಕೆ ದೊರಕುವಂತೆ ಅನುವು ಮಾಡಿಕೊಟ್ಟಿದ್ದು ಸಾರ್ವಜನಿಕ ವಲಯದಲ್ಲಿ ನಿರ್ದೇಶಕರ ಬಗೆಗೆ ಮೆಚ್ಚುಗೆಗೆ ಪಾತ್ರವಾಯಿತು. ಹಾಗೂ ಸಾರ್ವಜನಿಕರು ನಿರ್ದೇಶಕರಿಗೆ ಹೃತ್ಪೂರ್ವಕ ಕೃತಜ್ಞತೆ ತಿಳಿಸಿದರು.

    300x250 AD

    ಹಾಗೂ ನಮ್ಮ ಮನವಿಗೆ ಸ್ಪಂದಿಸಿ ನಮ್ಮ ಜಿಲ್ಲೆಯ ಹಾಲು ಉತ್ಪಾದನಾ ವಲಯವನ್ನು ಆದ್ಯತಾ ಗುಂಪಿನಲ್ಲಿ ಪರಿಗಣಿಸಿದ್ದಕ್ಕಾಗಿ ಮತ್ತು ಕೋವಿಡ್-19 2ನೇ ಸುತ್ತಿನ ಲಸಿಕೆಯನ್ನು ಹಾಲು ಉತ್ಪಾದನಾ ವಲಯಕ್ಕೆ ಮತ್ತು ಸಾರ್ವಜನಿಕರಿಗೆನೀಡಿದ್ದಕ್ಕಾಗಿ ಜಿಲ್ಲಾಡಳಿತಕ್ಕೆ, ಜಿಲ್ಲಾ ಆರೋಗ್ಯಾಧಿಕಾರಿಗಳಿಗೆ, ತಾಲೂಕಾ ಆರೋಗ್ಯಾಧಿಕಾರಿಗಳಿಗೆ ಮತ್ತು ಲಸಿಕೆ ನೀಡಿದ ತಾಲೂಕಾಸ್ಪತ್ರೆಯ ದಾದಿಯರಿಗೆ ಹಾಗೂ ಸಹಕರಿಸಿದ ಪೆÇೀಲೀಸ್ ಸಿಬ್ಬಂದಿಗಳಿಗೆ ಹೃತ್ಪೂರ್ವಕ ಧನ್ಯವಾದಗಳನ್ನು ಒಕ್ಕೂಟದ ನಿರ್ದೇಶಕ ಕೆಶನ್ಮನೆ ಅರ್ಪಿಸಿದ್ದಾರೆ.

    ಲಸಿಕಾ ವಿತರಣಾ ಕಾಯಕ್ರಮದಲ್ಲಿ ಒಕ್ಕೂಟದ ಮಾರುಕಟ್ಟೆ ಅಧಿಕಾರಿ ಬಸವರಾಜ ಸಲೋನಿ, ಶಿರಸಿ ಉಪವಿಭಾಗದ ಗುರುದರ್ಶನ ಭಟ್, ದಯಾನಂದ ಬೋರ್ಕರ್, ಅಭಿಷೇಕ ನಾಯ್ಕ ಉಪಸ್ಥಿತರಿದ್ದರು.

    Share This
    300x250 AD
    300x250 AD
    300x250 AD
    Leaderboard Ad
    Back to top