ಶಿರಸಿ: ಶಿರಸಿಯ ಸ್ಫೂರ್ತಿ ಕೇರಂ ಅಸೋಸಿಯೇಷನ್, ದೇವಿಕೆರೆ ಸರ್ಕಲ್’ನಲ್ಲಿ ಆ.29 ರವಿವಾರ ಪುರುಷರ ಸಿಂಗಲ್ ಕೇರಂ ಸ್ಪರ್ಧೆ ನಡೆಯಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಹೆಸರು ನೋಂದಾಯಿಸಲು ಹಾಗೂ ಹೆಚ್ಚಿನ ಮಾಹಿತಿಗಾಗಿ ಚಂದ್ರು ಭಟ್ ಮೊ.9483777600 ಇವರನ್ನು ಸಂಪರ್ಕಿಸಿಬಹುದು. ನಂತರದಲ್ಲಿ ಮಹಿಳೆಯರಿಗಾಗಿ, 12 ವರ್ಷ ದೊಳಗಿನ, 14 ವರ್ಷದೊಳಗಿನ, 18 ವರ್ಷದೊಳಗಿನ ಮಕ್ಕಳಿಗಾಗಿ ಹಾಗೂ 50 ವರ್ಷ ದಾಟಿದ ಪುರುಷ ಹಾಗೂ ಮಹಿಳೆಯರಿಗಾಗಿ ನಿರಂತರ ಕೇರಂ ಪಂದ್ಯಾಟ ಹೆಸರು ನೋಂದಾವಣೆ ಆದ ನಂತರ ನಡೆಸಲಾಗುತ್ತದೆ. ಮತ್ತು ರಾಜ್ಯ ಮಟ್ಟದ ಕ್ರೀಡೆಯಲ್ಲಿ ಭಾಗವಹಿಸಲು, ಆನ್ಲೈನಲ್ಲಿ ಆಡಲೂ ಮಾಹಿತಿ ನೀಡಲಾಗುವದು ಎಂದು ಸಂಘಟಕರು ತಿಳಿಸಿದ್ದಾರೆ.