ಕಾರವಾರ: ಲೈಟ್ ಹೌಸ್ ನೋಡಲು ಇಲ್ಲಿನ ಬೀಚ್’ನಲ್ಲಿ ನಿಲ್ಲಿಸಿಟ್ಟಿದ್ದ ದೋಣಿಯನ್ನು ಕದ್ದು ಹೋದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಕೋಣಿ ಬೀಚ್ ಗೆ ಬಂದಿದ್ದ ಮಹಾರಾಷ್ಟ್ರದ ಯುವಕ ಸಪ್ನಲ್ (21) ಪ್ರವಾಸಿಗನಿಗೆ ಅರಬ್ಬಿ ಸಮುದ್ರದ ಮಧ್ಯಭಾಗದಲ್ಲಿರುವ ಲೈಟ್ ಹೌಸ್ ನೋಡೋ ಹಂಬಲವಾಗಿದೆ. ಮೊದಲೇ ಕುಡಿದ ಮತ್ತಲ್ಲಿದ್ದ ಪ್ರವಾಸಿಗ ಬೀಚ್ ನಲ್ಲಿ ಇಟ್ಟಿದ್ದ ನಾಡದೋಣಿ ಯನ್ನು ಕದ್ದು ಲೈಟ್ ಹೌಸ್ ತಲುಪಿದ್ದಾನೆ.
ಸಮುದ್ರದ ಮಧ್ಯದಲ್ಲಿರುವ ಲೈಟ್ ಹೌಸ್ ಪಕ್ಕದ ದ್ವೀಪದಲ್ಲಿ ಸಿಲುಕಿಕೊಂಡಿದ್ದು, ಕರಾವಳಿ ಕಾವಲುಪಡೆ ಸಿಬ್ಬಂದಿ ರಕ್ಷಣೆ ಮಾಡಿದ್ದಾರೆ. ಬಳಿಕ ಈತನನ್ನು ಕಾರವಾರದ ಆಸ್ಪತ್ರೆಗೆ ದಾಖಲಿಸಲಾಗಿದೆ