ಭಟ್ಕಳ: ತನ್ನ ಪ್ರೀತಿಯನ್ನು ನಿರಾಕರಿಸಿದ್ದಕ್ಕೆ ಆಕೆಯನ್ನೇ ವೇಲ್’ನಿಂದ ಬಿಗಿದು ಕೊಲೆ ಮಾಡಿ, ನಂತರ ತಾನೂ ಆತ್ಮಹತ್ಯೆಗೆ ಪ್ರತ್ನ ಪಟ್ಟ ಘಟನೆ ಶಿವಮೊಗ್ಗದಲ್ಲಿ ನಡೆದಿದೆ.
ಭಟ್ಕಳದ ಕವಿತಾ ಕೊಲೆಯಾದವಾಳಗಿದ್ದು, ಶಿವಮೂರ್ತಿ ಎಂಬವ ಕೊಲೆ ಮಾಡಿದ್ದಾನೆ. ಕವಿತಾ ನಂಜಪ್ಪ ಲೈಫ್ ಕೇರ್ ನಲ್ಲಿ ನರ್ಸಿಂಗ್ ಓದುತಿದ್ದ ವಿದ್ಯಾರ್ಥಿನಿಯಾಗಿದ್ದು ಈಕೆಯ ಸ್ನೇಹಿತ ಶಿವಮೂರ್ತಿ ತನ್ನೊಂದಿಗೆ ನೆರಲಿಗೆ ಕಳಸೆ ಗ್ರಾಮದ ಹೊಸಕೆರೆ ಬಳಿಯ ಕಾಡಿಗೆ ಕರೆದುಕೊಂಡು ಹೋಗಿ ತನ್ನನ್ನು ಪ್ರೀತಿಸುವಂತೆ ಒತ್ತಾಯಿಸಿದ್ದಾನೆ. ಈ ವೇಳೆ ಈಕೆ ಆತನ ಪ್ರೀತಿಯನ್ನು ಒಪ್ಪದಿದ್ದಕ್ಕೆ ಆಕೆಯ ವೇಲ್ ನನ್ನು ಕುತ್ತಿಗೆಗೆ ಬಿಗಿದು ಕೊಲೆ ಮಾಡಿದ್ದಾನೆ. ನಂತರ ತಾನೂ ಸಹ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದು ಮೆಗ್ಗಾನ್ ಆಸ್ಪತ್ರೆಯಲ್ಲಿ ಚೇತರಿಸಿಕೊಳ್ಳುತ್ತಿದ್ದಾನೆ.
ಕವಿತಾ ಶವ ನಿನ್ನೆ ದಿನ ಹೊಸಕೆರೆಯಲ್ಲಿ ಪತ್ತೆಯಾಗಿತ್ತು. ಪೆÇೀಷಕರು ತುಂಗಾನಗರ ಠಾಣೆಯಲ್ಲಿ ಕಾಣೆಯಾದ ಕುರಿತು ದೂರು ನೀಡಿದ್ದರು. ಪ್ರೀತಿಯೇ ಈ ಕೆಯ ಕೊಲೆಗೆ ಕಾರಣವಾಗಿದೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.