ಶಿರಸಿ: ಭೂಮಿಪುತ್ರಿ ಮತ್ತು ಅರೇಕಾಪೋಟ್ ಸಂಸ್ಥೆಗಳ ಸಹಯೋಗದಲ್ಲಿ ಮಲೆನಾಡು ಶಿಕ್ಷಣ ಮತ್ತು ಗ್ರಾಮೀಣ ಅಭಿವೃದ್ಧಿ ಸಂಸ್ಥೆ ಶಿರಸಿ ಇವರು ಸಂಘಟಿಸಿಸ ‘ಕೈದೋಟ’ ಕಲಿಕೆಗಳ ಆಗರ ಈ ಕಾರ್ಯಕ್ರಮದ ಉದ್ಘಾಟನಾ ಸಮಾರಂಭ ಇಂದು ಚಂದನ ಆಂಗ್ಲ ಮಾಧ್ಯಮ ಶಾಲೆ ನರೇಬೈಲ್ ನಲ್ಲಿ ನಡೆಯಿತು.
ಮನುವಿಕಾಸ ಸಂಸ್ಥೆ ಶಿರಸಿಯ ಗಣಪತಿ ಭಟ್ ಕಾರ್ಯಕ್ರಮವನ್ನು ಜ್ಯೋತಿ ಬೆಳಗುವುದರ ಮೂಲಕ ಉದ್ಘಾಟಿಸಿ ಸಾವಯವ ಕೃಷಿಯು ಬಹಳ ಪ್ರಯೋಜನಕಾರಿಯಾದ ಕೃಷಿ ವಿಧಾನವಾಗಿದೆ. ಮತ್ತು ರಾಸಾಯನಿಕ ಕೃಷಿಗಿಂತ ಸಾವಯವ ಕೃಷಿಯಲ್ಲಿ ಜೀವವೈವಿಧ್ಯತೆ ಜಾಸ್ತಿಯಾಗುತ್ತದೆ ಎಂದರು.
ಮುಖ್ಯ ಅತಿಥಿಗಳಾಗಿ ಎ.ಪಿ.ಎಂ.ಸಿ ಶಿರಸಿಯ ಉಪಾಧ್ಯಕ್ಷೆ ಸವಿತಾ ಹೆಗಡೆ ಆಗಮಿಸಿದ್ದರು. ಮಿಯಾರ್ಡ್ಸ ಶಿರಸಿಯ ಅಧ್ಯಕ್ಷ ಎಸ್ ಆರ್ ಹೆಗಡೆ ಅಧ್ಯಕ್ಷತೆ ವಹಿಸಿದ್ದರು. ಚಂದನ ಆಂಗ್ಲ ಮಾಧ್ಯಮ ಶಾಲೆ ನರೇಬೈಲ್ ಆಡಳಿತಾಧಿಕಾರಿಣಿ ವಿದ್ಯಾ ನಾಯ್ಕ್‌ರವರು ಉಪಸ್ಥಿತರಿದ್ದರು.
ಕಾರ್ಯದರ್ಶಿ ಎಲ್ ಎಂ ಹೆಗಡೆ ಅತಿಥಿಗಳನ್ನು ಪರಿಚಯಿಸಿ ಸ್ವಾಗತಿಸಿದರು. ವಿದ್ಯಾರ್ಥಿನಿ ಇಂಚರಾ ಹೆಗಡೆ ನಿರ್ವಹಿಸಿದರು. ಶಿಕ್ಷಕಿ ಭಾರತಿ ಭಟ್ ವಂದಿಸಿದರು. ಕಾರ್ಯಕ್ರಮದಲ್ಲಿ ಪೂರ್ಣಿಮಾ ಹೆಗಡೆ, ಉಮಾ ಹೆಗಡೆ, ಮುಖ್ಯೋಪಾಧ್ಯಾಯರು, ಶಿಕ್ಷಕರು ಪಾಲಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.