ಶಿರಸಿ: ತಾಲೂಕಿನಲ್ಲಿ ಆ.27 ಶುಕ್ರವಾರ 5700 ಡೋಸ್ ಕೋವಿಶೀಲ್ಡ್ ಲಸಿಕೆ ಲಭ್ಯವಿದ್ದು, ಪ್ರಥಮ ಮತ್ತು ದ್ವತೀಯ ಡೋಸ್ ನವರು ಪಡೆದುಕೊಳ್ಳಬಹುದಾಗಿದೆ ಎಂದು ಆರೋಗ್ಯಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಲಭ್ಯವಿರುವ 5700 ಡೋಸ್ ಲಸಿಕೆಯನ್ನು ನವಣಗೇರಿಯಲ್ಲಿ 250, ಬೆಂಗಳೆ 250, ಉಂಚಳ್ಳಿ 250, ಕಾನಗೋಡ 250, ಹೆಗಡೆಕಟ್ಟಾ 500, ಆಡಳ್ಳಿ 250, ಬೆಳೆನಳ್ಳಿ 250, ಹೀಪನಳ್ಳಿ 250, ಸಾಲ್ಕಣಿ 250, ಸೋಂದಾ 500, ವಡ್ಡಳ್ಳಾ 300, ರಾಮಾಪುರ 200, ಚಿಪಗಿ 500, ಟಿಎಸ್‍ಎಸ್ ಸೂಪರ್ ಮಾರ್ಕೇಟ್ ಹೆಲ್ತ್ ಸೆಂಟರ್ 650, ಯಲ್ಲಾಪುರ ರಸ್ತೆ ಬಿ.ಆರ್.ಅಂಬೇಡ್ಕರ ಭವನದಲ್ಲಿ 1050 ಡೋಸ್ ಲಸಿಕೆ ಲಭ್ಯವಿದೆ ಎಂದು ತಿಳಿಸಿದ್ದಾರೆ.