ಕುಮಟಾ: ಕಮಲಾ ಬಾಳಿಗಾ ಕಾಲೇಜಿನ ಇಬ್ಬರು ವಿದ್ಯಾರ್ಥಿನಿಯರು ದಾವಣಗೆರೆಯಲ್ಲಿ ನಡೆದ ರಾಜ್ಯಮಟ್ಟದ ಲಿಖಿತ ಪ್ರಬಂಧ ಸ್ಪರ್ಧೆಯಲ್ಲಿ ದ್ವಿತೀಯ ಹಾಗೂ ತೃತೀಯ ಸ್ಥಾನ ಪಡೆದು ಕಾಲೇಜಿಗೆ ಕೀರ್ತಿ ತಂದಿದ್ದಾರೆ.
ರಮ್ಯಾ ಶ್ರೀಧರ ಭಟ್ ದ್ವಿತೀಯ ಹಾಗೂ ಪಲ್ಲವಿ ರಮಾನಂದ ನಾಯ್ಕ ತೃತೀಯ ಸ್ಥಾನ ಪಡೆದುಕೊಂಡಿದ್ದು,ದಾವಣಗೆರೆಯ ಪ್ರೇಮಾ ಅರುಣಾಚಲ್ ರೇವರ್ಣಕರ್ ಪ್ರತಿಷ್ಟಾನದಿಂದ 75 ನೇ ಸ್ವಾತಂತ್ರೋತ್ಸ್ಯವದ ಅಮೃತ ಮಹೋತ್ಸವದ ಅಂಗವಾಗಿ ಹಮ್ಮಿಕೊಂಡಿದ್ದ ರಾಜ್ಯಮಟ್ಟದ ಲಿಖಿತ ಪ್ರಬಂಧ ಸ್ಪರ್ಧೆಯಲ್ಲಿ ಸಾಧನೆ ಮಾಡಿದ್ದಾರೆ.
ವಿಧ್ಯಾರ್ಥಿನಿಯರ ಈ ಸಾಧನೆಗೆ ಕಾಲೇಜಿನ ಪ್ರಾಚಾರ್ಯರು, ಕೆನರಾ ಕಾಲೇಜು ಸೊಸೈಟಿಯ ಪದಾಧಿಕಾರಿಗಳು, ಸದಸ್ಯರು,ಕಾಲೇಜಿನ ಶಿಕ್ಷಕವೃಂದದಿಂದ ಅಭಿನಂದನೆ ಸಲ್ಲಿಸಿದ್ದಾರೆ.