• Slide
  Slide
  Slide
  previous arrow
  next arrow
 • SSLC ಯಲ್ಲಿ ಜನತಾ ವಿದ್ಯಾಲಯ ವಿದ್ಯಾರ್ಥಿನಿ ಜ್ಯೋತಿ ಸಾಧನೆ; ಸನ್ಮಾನ

  300x250 AD

  ಕುಮಟಾ: ಪ್ರಸಕ್ತ ಸಾಲಿನ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ತಾಲೂಕಿನ ಮಿರ್ಜಾನಿನ ಜನತಾ ವಿದ್ಯಾಲಯ ಪ್ರೌಢಶಾಲೆಯ ವಿದ್ಯಾರ್ಥಿನಿ ಜ್ಯೋತಿ ಲಿಂಗಪ್ಪ ಪಟಗಾರ 625 ಕ್ಕೆ 615 ಅಂಕಗಳಿಸಿ, ಶಾಲೆಯ ಇತಿಹಾಸದಲ್ಲೇ ಗರಿಷ್ಟ ಅಂಕಗಳಿಸಿದ ಹಿನ್ನೆಲೆಯಲ್ಲಿ ಶಾಲಾಭಿವೃದ್ಧಿಯ ಸಮಿತಿ ವತಿಯಿಂದ ಅವಳನ್ನು ಸನ್ಮಾನಿಸಿ, ಗೌರವಿಸಲಾಯಿತು.

  ಜ್ಯೋತಿಯು ಇಂಗ್ಲೀಷ್, ಹಿಂದಿ ಮತ್ತು ಸಮಾಜ ವಿಜ್ಞಾನದಲ್ಲಿ ಶೇ.100 ಅಂಕಗಳಿಸಿದ್ದು, ಈಕೆಯ ಗರಿಷ್ಟ ಸಾಧನೆಯಾಗಿದೆ. ಶಾಲೆಗೆ ಕೀರ್ತಿ ತಂದ ಇವಳನ್ನು ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಗಜಾನನ ನಾಯ್ಕ, ಶಾಲಾ ಮೇಲುಸ್ತುವಾರಿ ಸಮಿತಿಯ ಅಧ್ಯಕ್ಷ ವಿಘ್ನೇಶ್ವರ ಗುನಗಾ, ಶಾಲಾ ಮುಖ್ಯಾಧ್ಯಾಪಕ ವಿ.ಪಿ.ಶ್ಯಾನಭಾಗ ಹಾಗೂ ಶಾಲಾ ಸಿಬ್ಬಂದಿ ವರ್ಗದವರು ವಿದ್ಯಾರ್ಥಿನಿ ಮನೆಗೆ ಭೇಟಿ ನೀಡಿ, ಸನ್ಮಾನ ಮಾಡಿದರು.

  300x250 AD

  ನಂತರ ಗಜಾನನ ನಾಯ್ಕ ಮಾತನಾಡಿ, ಇದೇ ರೀತಿ ಮುಂದೆಯೂ ಆಕೆ ರಾಜ್ಯಕ್ಕೆ ಪ್ರಥಮ ರ್ಯಾಂಕ್ ಪಡೆದು, ನಮ್ಮ ಊರಿನ ಕೀರ್ತಿ ತರಬೇಕು ಎಂದ ಅವರು ಮುಂದಿನ ವಿದ್ಯಾಭ್ಯಾಸಕ್ಕೆ ಸಹಾಯ ಮಾಡುವುದಾಗಿ ತಿಳಿಸಿದರು.

  ವಿಘ್ನೇಶ್ವರ ಗುನಗಾ ಹಾಗೂ ಶಾಲಾ ಮುಖ್ಯಾಧ್ಯಾಪಕ ವಿ.ಪಿ.ಶ್ಯಾನಭಾಗ ವಿದ್ಯಾರ್ಥಿನಿ ಸಾಧನೆಗೆ ಶ್ರಮಿಸಿದ ಕುರಿತು ಪ್ರಶಂಸಿದರು. ಈ ಸಂದರ್ಭದಲ್ಲಿ ವಿದ್ಯಾರ್ಥಿನಿ ಪಾಲಕರು ಸಂತಸ ವ್ಯಕ್ತಪಡಿಸಿದ್ದಾರೆ.

  Share This
  300x250 AD
  300x250 AD
  300x250 AD
  Leaderboard Ad
  Back to top