ನವದೆಹಲಿ: ದೇಶದ ಹತ್ತು ಲಕ್ಷಕ್ಕೂ ಹೆಚ್ಚು ಸಾರ್ವಜನಿಕ ವಲಯದ ಬ್ಯಾಂಕ್ ಉದ್ಯೋಗಿಗಳು, ಕುಟುಂಬ ಪಿಂಚಣಿದಾರರಿಗೆ ಕಳೆದ ಡ್ರಾ ಮಾಡಿದ ವೇತನದ 30% ಹೆಚ್ಚಿಸುವ ಭಾರತೀಯ ಬ್ಯಾಂಕುಗಳ ಸಂಘದ ಪ್ರಸ್ತಾಪಕ್ಕೆ ಕೇಂದ್ರ ಸರ್ಕಾರ ಅನುಮೋದನೆ ನೀಡಿದೆ.
ರಾಷ್ಟ್ರೀಯ ಪಿಂಚಣಿ ವ್ಯವಸ್ಥೆಯ ಅಡಿಯಲ್ಲಿ ಉದ್ಯೋಗಿಗಳ ಪಿಂಚಣಿ ನಿಧಿಗೆ ಉದ್ಯೋಗದಾತ ಬ್ಯಾಂಕ್‍ಗಳ ಕೊಡುಗೆಯನ್ನು ಪ್ರಸ್ತುತ ಇರುವ 10% ದಿಂದ 14% ಗೆ ಹೆಚ್ಚಿಸಲಾಗುವುದು ಎಂದು ತಿಳಿಸಿದೆ.
ಮುಂದಿನ ದಿನಗಳಲ್ಲಿ ಪಿಂಚಣಿ ಪಡೆಯುತ್ತಿದ್ದ ಬ್ಯಾಂಕ್ ಉದ್ಯೋಗಿಯೊಬ್ಬರು ಸಾವನ್ನಪ್ಪಿದರೆ ಅವರು ಕರ್ತವ್ಯದಲ್ಲಿದ್ದ ಸಂದರ್ಭದಲ್ಲಿ ಪಡೆದ ಕೊನೆಯ ವೇತನದ 30% ರಷ್ಟನ್ನು ಅವರ ನಾಮಿನಿಗೆ ನೀಡಲಾಗುತ್ತದೆ. ಅಂದರೆ ಗರಿಷ್ಠ 30 ಸಾವಿರದಿಂದ 40 ಸಾವಿರದ ವರೆಗೆ ಪಿಂಚಣಿ ಪಡೆಯಬಹುದು ಎಂದು ಹಣಕಾಸು ಸೇವೆಗಳ ವಿಭಾಗದ ಕಾರ್ಯದರ್ಶಿ ತಿಳಿಸಿದ್ದಾರೆ. ಈವರೆಗೆ 9,284 ರೂ. ಕೌಟುಂಬಿಕ ಪಿಂಚಣಿ ನೀಡಲಾಗುತ್ತಿತ್ತು.