• Slide
    Slide
    Slide
    previous arrow
    next arrow
  • ಬೈಕ್ ಕಳ್ಳನ ಬಂಧನ; ಪೊಲೀಸರ ಕಾರ್ಯಕ್ಕೆ ಶ್ಲಾಘನೆ

    300x250 AD

    ಕುಮಟಾ: ಪಟ್ಟಣದ ಸನ್ಮಾನ್ ಲಾಡ್ಜ್ ಎದುರು ನಿಲ್ಲಿಸಿಟ್ಟಿದ್ದ, ಬೆಂಗಳೂರಿನ ನಾಗರಭಾವಿ ಮೂಲದ ಧವನ್ ಉಮೇಶ್ ಪಟೇಲ್ ಎಂಬಾತನ ಬೈಕ್ ಕಳ್ಳತನವಾಗಿರುವ ಕುರಿತು ಕುಮಟಾ ಶಹರ ಪೊಲೀಸ್ ಠಾಣೆಯಲ್ಲಿ ಆ.21 ರಂದು ಪ್ರಕರಣ ದಾಖಲಾಗಿತ್ತು. ಪ್ರಕರಣದ ಜಾಡು ಹಿಡಿದು ಹೊರಟ ಪೊಲೀಸರು ಬುಧವಾರ ಬೈಕ್ ಸಮೇತ ಕಳ್ಳನನ್ನು ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.

    ಬೆಂಗಳೂರು ಮೂಲದ ಧವನ್ ಪಟೇಲ್ ಎಂಬಾತ ಆ 21 ರಂದು ಪಟ್ಟಣದ ಸನ್ಮಾನ್ ಲಾಡ್ಜ್ನಲ್ಲಿ ತಂಗಿದ್ದ ರಾತ್ರಿ ವೇಳೆ ಅವರ ಪಲ್ಸರ್ 200 ಎನ್.ಎಸ್ ಬೈಕ್ ಕಳ್ಳತನವಾಗಿತ್ತು. ಈ ಕುರಿತು ಆತ ಕುಮಟಾ ಶಹರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಅದರಂತೆ ಪ್ರಕರಣದ ಜಾಡುಹಿಡಿದು ಹೊರಟ ಕುಮಟಾ ಪೊಲೀಸರು ಕಾರವಾರದ ಶಿರವಾಡದ ಬಂಗಾರಪ್ಪ ನಮಗರ ಮೂಲದ ಆನಂದ ನಿಂಗಬಸಪ್ಪ ಚಲವಾದಿ (19) ಈತನನ್ನು ಬೈಕ್ ಸಮೇತ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

    300x250 AD

    ಅಲ್ಲದೇ, ಈತನ ಮೇಲೆ ಐಪಿಸಿ 379 ನೇದರ ಅಡಿಯಲ್ಲಿ ಪ್ರಕರಣ ದಾಖಲಿಸಿ, ಬಂಧಿಸಲಾಗಿದೆ. ಈ ಪ್ರಕರಣದಲ್ಲಿ ಎಸ್ಪಿ ಶಿವಪ್ರಕಾಶ ದೇವರಾಜು, ಎಡಿಷನಲ್ ಎಸ್ಪಿ ಬದರಿನಾಥ, ಡಿ.ಎಸ್.ಪಿ ಬೆಳ್ಳಿಯಪ್ಪ ಕೆ.ಯು ಹಾಗೂ ಕುಮಟಾ ಸಿಪಿಐ ಶಿವಪ್ರಕಾಶ್ ಆರ್ ನಾಯ್ಕ, ಪಿ.ಎಸ್.ಐ ಆನಂದ ಮೂರ್ತಿ ಹಾಗೂ ಕ್ರೈಂ ಪಿ.ಎಸ್.ಐ ಪದ್ಮಾ ದೇವಳಿ ಅವರ ತಂಡ ಪ್ರಮುಖ ಪಾತ್ರ ವಹಿಸಿತ್ತು. ಕುಮಟಾ ಪೊಲೀಸರ ಈ ಕಾರ್ಯಕ್ಕೆ ಎಸ್ಪಿ ಶಿವಪ್ರಕಾಶ್‌ರವರು ಪ್ರಶಂಸೆ ವ್ಯಕ್ತಪಡಿಸಿ, ಸೂಕ್ತ ಬಹುಮಾನ ಘೋಶಿಸಿದ್ದಾರೆ

    Share This
    300x250 AD
    300x250 AD
    300x250 AD
    Leaderboard Ad
    Back to top