• Slide
    Slide
    Slide
    previous arrow
    next arrow
  • ಲಂಡಕನಹಳ್ಳಿಯಲ್ಲಿ ಭಾಜಪಾ ಭೂತ್ ಮಟ್ಟದ ಸಮಾವೇಶ

    300x250 AD

    ಶಿರಸಿ: ದೊಡ್ನಳ್ಳಿ ಗ್ರಾಮ ಪಂಚಾಯತ್ ಲಂಡಕನಳ್ಳಿ ಭೂತ ನಂ-56 ಸಮಾವೇಶ ಮತ್ತು ಭೂತ್ ಅಧ್ಯಕ್ಷರ ಮನೆಗೆ ನಾಮ ಫಲಕ ಅಳವಡಿಸುವ ಮತ್ತು ನೂತನವಾಗಿ ಗ್ರಾಮ ಪಂಚಾಯತಗೆ ಆಯ್ಕೆಯಾದ ಸದಸ್ಯರಿಗೆ ಸನ್ಮಾನ ಕಾರ್ಯಕ್ರಮ ನಡೆಯಿತು.

    ಲಂಡಕನಹಳ್ಳಿ ಭೂತಿನ ಸುಧೀರ ಬಾಬು ದೇವಾಡಿಗ, ರಾಜು ಛಲವಾದಿ, ಲೀಲಾವತಿ ಪಡತಿ, ಸುಮಿತ್ರಾ ಮೇದಾರ ಇವರುಗಳು ಹೊಸದಾಗಿ ಸೇರ್ಪಡೆಗೊಂಡಿದ್ದು, ಸನ್ಮಾನಿಸಲಾಯಿತು. ಇದೇ ಸಂದರ್ಭದಲ್ಲಿ ತಾಲೂಕು ಪಂಚಾಯ್ತಿ ಸದಸ್ಯರಾದ ರತ್ನಾ ಶಿವರಾಮ ಶೆಟ್ಟಿ ಭಾರತೀಯ ಜನತಾ ಪಕ್ಷಕ್ಕೆ ಸೇರ್ಪಡೆಯಾದರು. ನಂತರ ಭೂತ್ ಅಧ್ಯಕ್ಷರ ಮನೆಗೆ ನಾಮ ಫಲಕ ಅಳವಡಿಸಲಾಯಿತು.

    300x250 AD

    ಕಾರ್ಯಕ್ರಮದಲ್ಲಿ ಶಿರಸಿ ಗ್ರಾಮೀಣ ಮಂಡಲದ ಅಧ್ಯಕ್ಷರಾದ ನರಸಿಂಹ ಹೆಗಡೆ ಬಕ್ಕಳ, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಚಂದ್ರು ಎಸಳೆ, ದೊಡ್ನಳ್ಳಿ ಮಹಾಶಕ್ತಿ ಕೇಂದ್ರದ ಅಧ್ಯಕ್ಷ ವಸಂತ ಭಟ್ ಯಡಳ್ಳಿ, ಕಾರ್ಯದರ್ಶಿ ಪ್ರಸನ್ನ ಹೆಗಡೆ ಇಸಳೂರು, ಯುವ ಮೋರ್ಚಾ ಅಧ್ಯಕ್ಷ ಸಚಿನ್ ಭಟ್, ಭೂತ ಅಧ್ಯಕ್ಷ ನಾಗೇಶ್ ದೇವಾಡಿಗ ಎಸಳೆ, ನಾಗರಾಜ ಆರೇರ, ಸತೀಶ್ ನಾಯಕ ಎಸಳೆ, ಮಂಡಲ ಕೋಶಾಧ್ಯಕ್ಷ ಕರುಣಾಕರ ಹೆಗಡೆ, ಶಿವರಾಮ ಶೆಟ್ಟಿ, ರಾಜು ದೇವಾಡಿಗ, ಸದು ಆರೇರ, ಪ್ರದೀಪ ಆರೇರ, ಭರತ್ ರಜಪೂತ್ ಮುಂತಾದವರು ಭಾಗವಹಿಸಿದ್ದರು

    Share This
    300x250 AD
    300x250 AD
    300x250 AD
    Leaderboard Ad
    Back to top