• Slide
    Slide
    Slide
    previous arrow
    next arrow
  • ಗೋ ಕಳ್ಳತನ ಪ್ರಕರಣ; 7 ಆರೋಪಿಗಳ ಬಂಧನ, ಮೂವರು ನಾಪತ್ತೆ

    300x250 AD

    ಹೊನ್ನಾವರ: ಕಳೆದ ಸ್ವಲ್ಪ ದಿನಗಳ ಹಿಂದಷ್ಟೇ ಇಲ್ಲಿನ ಗುಣವಂತೆ ಬಳಿ ರಾತ್ರಿ ಸಮಯದಲ್ಲಿ ಐಶಾರಾಮಿ ಕಾರೊಂದರಲ್ಲಿ ಬಂದು ರಸ್ತೆ ಪಕ್ಕ ಮಲಗಿದ್ದ ದನಗಳನ್ನು ಕದ್ದೊಯ್ದಿದ್ದ ಕಳ್ಳರನನು ಬಂಧಿಸುವಲ್ಲಿ ಇಲ್ಲಿನ ಪೊಲೀಸರು ಯಶಸ್ವಿಯಾಗಿದ್ದಾರೆ.

    ತಾಲೂಕಿನ ಮಂಕಿ ಮಾವಿನಕಟ್ಟಾ ಮತ್ತು ಗುಣವಂತೆ ಭಾಗದಲ್ಲಿ ಐಶಾರಾಮಿ ಕಾರಿನಲ್ಲಿ ಬಂದ ಗೋಕಳ್ಳರು ಕಾರಲ್ಲಿ ದನಗಳನ್ನು ತುಂಬುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ಪ್ರಕರಣ ದಾಖಲಿಸಿಕೊಂಡ ಪೆÇಲೀಸರು ಇದೀಗ ಆರೋಪಿಗಳನ್ನು ಬಂಧಿಸಿದ್ದು, ಪ್ರಕರಣದಲ್ಲಿ 10 ಜನ ಆರೋಪಿಗಳಿದ್ದು, 7 ಜನರನ್ನು ಬಂಧಿಸಿದ್ದು, ಇನ್ನು ಮೂವರಿಗೆ ಹುಡುಕಾಟ ನಡೆದಿದೆ.

    300x250 AD

    ವಾಜೀದ ಜಾಪರ ವಾಟಿ, ಮೂಲಾರ, ಎಸ್.ಎಸ್ ನರ್ಸರಿರಸ್ತೆ, ಕಾನೂ, ಉಡುಪಿ ಜಿಲ್ಲೆ,ಸಯ್ಯದ್ ಮುಸ್ಸಾ ಸಯ್ಯದ್ ಅಹಮ್ಮದ ಹನಿಫಾಬಾದ, ತಲಹಾ ಕಾಲೋನಿ, ಹಬಳ, ಭಟ್ಕಳ, ದೃಶ್ಯ ದಿನೇಶ ಮೆಂಡನ್, ಕಟಪಾಡಿ, ಉಡುಪಿ,ವಣವ ತಂದೆ ರಾಜಶೇಖರ ಶೆಟ್ಟಿ, ಕೆರನಕಾರಪಾಡಿ, ಉಡುಪಿ, ಮಹಮ್ಮದ ಫಯಾಜ್ ಮಹಮ್ಮದ್ ಮನ್ಸೂಮ್ ಕಾಲೋನಿ, ಭಟ್ಕಳ, ಮಹಮ್ಮದ ಇಬ್ರಾಹಿಂ ಮಹಮ್ಮದ ಹುಸೇನ ಹವಾ, ಸಿದ್ಧಿಕ್ ಸ್ಟ್ರೀಟ್ ಭಟ್ಕಳ, ನರತಂದ ಜಾಯಿರಿ ಹುಸೇನ, ಉಡುಪಿ ಇವರನ್ನು ಬಂಧಿಸಲಾಗಿದೆ. ಆರೋಪಿಗಳಾದ ಅಜುರುಬ್ಬಿನ ತಂದೆ ಜಪ್ತಾಲ ಖಾದರ್, ಕಾಪು, ಉಡುಪಿ, ಆಶಿಕ ಸಂಶುದ್ಧಿನ ಮಲ್ಲರ್, ಕಾಪು, ಉಡುಪಿ. ನೂರಿನ ಗೋಮಾ, ನವಾಯಕೇರಿ, ಮಾವಳ್ಳಿ-1, ಮುರ್ಡೇಶ್ವರ, ಭಟ್ಕಳ, ನಾಪತ್ತೆಯಾಗಿದ್ದಾರೆ.

    ಸಿಸಿಟಿವಿಯಲ್ಲಿ ದೊರೆತ ಮಾಹಿತಿ ಆಧರಿಸಿ, ಎರಡನೇ ದಿನದಲ್ಲಿ ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ. ಆರೋಪಿಗಳ ಜೊತೆ ಕೃತ್ಯಕ್ಕೆ ಬಳಸುತ್ತಿದ್ದ ಎರಡು ವಾಹನ ವಶಕ್ಕೆ ತೆಗೆದುಕೊಂಡು ವಿಚಾರಣೆ ಆರಂಭಿಸಿದ್ದಾರೆ.

    Share This
    300x250 AD
    300x250 AD
    300x250 AD
    Leaderboard Ad
    Back to top