ಕಾರವಾರ: ಜಿಲ್ಲೆಯಲ್ಲಿ ಆ.27 ಶುಕ್ರವಾರ ಒಟ್ಟೂ 20,200 ಡೋಸ್ ಕೋವಿಶೀಲ್ಡ್ ಲಸಿಕೆ ಲಭ್ಯವಿದ್ದು, ಪ್ರಥಮ ಮತ್ತು ದ್ವಿತೀಯ ಡೋಸ್ ಪಡೆದುಕೊಳ್ಳುವವರು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ಅಧಿಕಾರಿಗಳು ತಿಳಿಸಿದ್ದಾರೆ.
ಲಭ್ಯವಿರುವ 20,200 ಡೋಸ್ ಲಸಿಕೆಯನ್ನು ಅಂಕೋಲಾದಲ್ಲಿ 1,500, ಭಟ್ಕಳದಲ್ಲಿ 1,500, ಹಳಿಯಾಳದಲ್ಲಿ 1,500, ಹೊನ್ನಾವರ 2,000, ಜೋಯ್ಡಾದಲ್ಲಿ 1,000, ಕಾರವಾರ 1,500, ಕುಮಟಾ 2,000, ಶಿರಸಿ 5,700, ಸಿದ್ದಾಪುರ 2,500, ಜಿಲ್ಲಾಸ್ಪತ್ರೆಯಲ್ಲಿ 500, ದಾಂಡೇಲಿಯಲ್ಲಿ 500 ಡೋಸ್ ಲಸಿಕೆ ಲಭ್ಯವಿದೆ ಎಂದು ಮಾಹಿತಿ ನೀಡಿದ್ದಾರೆ.