ಶಿರಸಿ: ಇಲ್ಲಿಯ ಹೊಂಗಿರಣ ಫೌಂಡೇಶನ್‍ನ ಸಹಯೋಗದಲ್ಲಿ ಲೇಖಕ ಜಿ.ವಿ. ಕೊಪ್ಪಲ ತೋಟ ರವರ ರಸಋಷಿ, ಡಾ|.ಪಿ.ಸಿ ಐರಸಂಘ ಅವರ ಬದುಕು ಬರಹ ಸಂಪಾದಿತ ಕೃತಿ ನೆಮ್ಮದಿ ಕುಟೀರದಲ್ಲಿ ಆ.29 ರ ಸಂಜೆ ಮಧ್ಯಾಹ್ನ 3 ಗಂಟೆಗೆ ಬಿಡುಗಡೆ ಸಮಾರಂಭ ನಡೆಯಲಿದೆ.
ನಿವೃತ್ತ ಡೀನ್, ಸಾಹಿತಿಗಳು, ಯಕ್ಷಗಾನ ಚಿಂತಕ ಪ್ರೊ|| ಡಾ|| ಜಿ.ಎ. ಹೆಗಡೆ ಸೋಂದಾ ಪುಸ್ತಕ ಲೋಕಾರ್ಪಣೆಗೊಳಿಸಲಿದ್ದಾರೆ.
ಜನಮಾಧ್ಯಮ ಸಂಪಾದಕರ ಅಶೋಕ ಹಾಸ್ಯಗಾರ ಅಧ್ಯಕ್ಷತೆ ವಹಿಸಲಿದ್ದು, ಲೇಖಕ ಗಣಪತಿ ಭಟ್ಟ ವರ್ಗಾಸರ ಪುಸ್ತಕ ಪರಿಚಯಿಸುವರು. ಮುಖ್ಯ ಅತಿಥಿಗಳಾಗಿ ನಿವೃತ್ತ ಪ್ರಾಂಶುಪಾಲ ಕೆ.ಎನ್. ಹೊಸ್ಮನಿ, ನಿವೃತ್ತ ಶಿಕ್ಷಕ ಜಿ.ಆರ್. ಭಾಗ್ವತ್ ಹಾಗೂ ಚಿಂತಕ ವಿ.ಪಿ.ವೈಶಾಲಿ ಪಾಲ್ಗೊಳ್ಳುವರು.
ನಂತರ `ಬದುಕು ಬರಹ ಸಾಹಿತ್ಯಿಕ ಚಿಂತನ ಗೋಷ್ಠಿ’ ನಡೆಯಲಿದ್ದು ಡಿ. ಎಂ. ಭಟ್ಟ ಕುಳವೆ ಅಧ್ಯಕ್ಷತೆ ವಹಿಸಲಿದ್ದು, ಕವಿ ರಮೇಶ ಹೆಗಡೆ ಕೆರೆಕೋಣ ವಿಷಯ ಮಂಡಿಸುವರು. ಸಂವಾದದಲ್ಲಿ ವೇ.ಮಹಾಬಲೇಶ್ವರ ಭಟ್ಟ ನಡುಗೋಡ, ಸುಬ್ರಾಯ ಭಟ್ಟ ಬಕ್ಕಳ, ಸುಮುಖ ಟಿ.ವಿ. ಕೆ. ಮಹೇಶ ಲೇಖಕ, ಹೆಚ್.ಗಣೇಶ ಚಿಂತಕ, ದತ್ತಗುರು ಕಂಠಿ ಕವಿ, ಕೃಷ್ಣಾ ಪದಕಿ ಸಾಹಿತಿಗಳು ಪಾಲ್ಗೊಳ್ಳುವರು. ಹಿರಿಯ ಲೇಖಕ ಮನೋಹರ ಮಲ್ಮನೆ, ಸಮನ್ವಯಕಾರರಾಗಿ ಉಪಸ್ಥಿತರಿರುವರು.