ಶಿರಸಿ: ಕಳೆದ ಮೂವತ್ಮೂರು ವರ್ಷಗಳಿಂದ ಮುದ್ರಣ ಕಾರ್ಯದ ಮೂಲಕ ಸಹಕಾರಿ ಕ್ಷೇತ್ರದಲ್ಲಿ ತನ್ನದೇ ಛಾಪನ್ನು ಹೊಂದಿದ ಶಿರಸಿಯ ದಿ ಚೇತನಾ ಪ್ರಿಂಟಿಂಗ್ ಆ್ಯಂಡ್ ಪಬ್ಲಿಷಿಂಗ್ ಕೋ-ಆಪ್ ಸೊಸೈಟಿಯ 2020-21 ನೇ ಸಾಲಿನ 33ನೇ ವಾರ್ಷಿಕ ಮಹಾಸಭೆಯು ಆ.31ರ ಮಂಗಳವಾರ ಮಧ್ಯಾಹ್ನ 3.30ಕ್ಕೆ ಶಿರಸಿಯ ಟಿ.ಎಮ್.ಎಸ್ ಸಭಾಂಗಣದಲ್ಲಿ ಜಿ. ಎಮ್. ಹೆಗಡೆ ಹುಳಗೋಳರ ಅಧ್ಯಕ್ಷತೆಯಲ್ಲಿ ನಡೆಯಲಿದೆ.
ಸಭೆಯಲ್ಲಿ ಭಾಗವಹಿಸುವ ಸದಸ್ಯರುಗಳು ಕಡ್ಡಾಯವಾಗಿ ಮಾಸ್ಕ್ ಧರಿಸಿ ಬರುವುದರ ಜೊತೆಗೆ ಭೌತಿಕ ಅಂತರ ಕಾಯ್ದುಕೊಳ್ಳಬೇಕು. ಅಲ್ಲದೇ ಮುದ್ರಣಾಲಯದ ಕಾರ್ಯವೈಖರಿ ಕುರಿತು ಸಲಹೆ, ಸೂಚನೆಗಳನ್ನು ನೀಡುವಂತೆ ಸಂಸ್ಥೆಯ ಮುಖ್ಯಕಾರ್ಯನಿರ್ವಾಹಕ ಪ್ರಸಾದ ಹೆಗಡೆ ಕಡಬಾಳ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.