• Slide
    Slide
    Slide
    previous arrow
    next arrow
  • ಸೆ.5 ರೊಳಗೆ ಶಿಕ್ಷಕರಿಗೆ ಕೊರೊನಾ ಲಸಿಕೆ; ಸಚಿವ ಮನ್ಸುಖ್ ಮಾಂಡವಿಯಾ

    300x250 AD

    ನವದೆಹಲಿ: ಕೇಂದ್ರ ಸರ್ಕಾರ ಈ ಬಾರಿ ರಾಜ್ಯಗಳಿಗೆ ಹೆಚ್ಚುವರಿ ಎರಡು ಕೋಟಿಗೂ ಅಧಿಕ ಕೊರೋನಾ ಲಸಿಕೆಗಳನ್ನು ಒದಗಿಸಲಿದ್ದು, ಸೆಪ್ಟೆಂಬರ್ 5 ರ ಶಿಕ್ಷಕರ ದಿನಾಚರಣೆಗೂ ಮುನ್ನ ಎಲ್ಲಾ ಶಿಕ್ಷಕರಿಗೆ ಆದ್ಯತೆಯ ಮೇರೆಗೆ ಲಸಿಕೆ ಹಾಕಬೇಕು ಎಂದು ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ ತಿಳಿಸಿದ್ದಾರೆ.

    ಈ ತಿಂಗಳಲ್ಲಿ ಪ್ರತಿ ರಾಜ್ಯಗಳಿಗೆ ಲಸಿಕೆಗಳನ್ನು ಒದಗಿಸುವುದರೊಂದಿಗೆ, ಹೆಚ್ಚುವರಿಯಾಗಿ ಎರಡು ಕೋಟಿಗೂ ಹೆಚ್ಚು ಡೋಸ್ ಲಸಿಕೆಗಳನ್ನು ನೀಡಲಾಗುತ್ತದೆ. ಈ ಲಸಿಕೆಗಳನ್ನು ಬಳಸಿ ಶಿಕ್ಷಕರ ದಿನಾಚರಣೆಗೂ ಮೊದಲು ಎಲ್ಲಾ ಶಿಕ್ಷಕರಿಗೂ ಆದ್ಯತೆಯ ಮೇರೆಗೆ ಲಸಿಕೆ ಹಾಕುವಂತೆ ಸರ್ಕಾರಗಳಿಗೆ ಸೂಚಿಸಿದ್ದಾರೆ.

    300x250 AD

    ಕೊರೋನಾ ಆರಂಭವಾದ ಬಳಿಕ ಕಳೆದ ವರ್ಷ ಮಾರ್ಚ್ ತಿಂಗಳಿನಿಂದ ಶಾಲೆಗಳನ್ನು ಮುಚ್ಚಲಾಗಿತ್ತು. ಇದೀಗ ಹಲವು ರಾಜ್ಯಗಳು ಶಾಲೆಯನ್ನು ಮತ್ತೆ ತೆರೆಯಲಾರಂಭಿಸಿವೆ. ಈ ನಿಟ್ಟಿನಲ್ಲಿ ಶಾಲಾ ಸಿಬ್ಬಂದಿ ಮತ್ತು ಶಿಕ್ಷಕರ ಸುರಕ್ಷತಾ ದೃಷ್ಟಿಯಿಂದ ಅವರಿಗೆ ಲಸಿಕೆ ನೀಡುವಂತೆ ಮಾಂಡವಿಯಾ ತಿಳಿಸಿದ್ದಾರೆ.
    ನ್ಯೂಸ್ 13

    Share This
    300x250 AD
    300x250 AD
    300x250 AD
    Leaderboard Ad
    Back to top