ಕಾರವಾರ: ಪ್ರಸಕ್ತ ವರ್ಷದ 9ನೇ ತರಗತಿಯಿಂದ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಆ. 23ರಿಂದ ಭೌತಿಕ ತರಗತಿಗಳು ಪ್ರಾರಂಭವಾಗಿರುವ ಹಿನ್ನೆಲೆಯಲ್ಲಿ ಕಳೆದ ವರ್ಷದಲ್ಲಿ ಬಸ್ ಪಾಸ್ ಪಡೆಯದೇ ಇರುವ ಹಾಗೂ ಪ್ರಸಕ್ತ ಸಾಲಿನಲ್ಲಿ ಪ್ರವೇಶಾತಿ ಪಡೆದ ಎಲ್ಲ ವಿದ್ಯಾರ್ಥಿಗಳಿಗೆ ಬಸ್ ಗಳಲ್ಲಿ ಉಚಿತವಾಗಿ ಪ್ರಯಾಣಿಸಲು ಅವಕಾಶ ಕಲ್ಪಿಸಲಾಗಿದೆ.
ವಿದ್ಯಾರ್ಥಿಗಳ ಶೈಕ್ಷಣಿಕ ಹಿತದೃಷ್ಟಿಯಿಂದ ಅವರ ವಾಸ ಸ್ಥಳದಿಂದ ಪ್ರವೇಶಾತಿ ಪಡೆದ ಶಾಲಾ, ಕಾಲೇಜುಗಳಿಗೆ ಗರಿಷ್ಠ 60 ಕಿ.ಮೀ. ವ್ಯಾಪ್ತಿಯ ವರೆಗೆ ಸಂಬಂಧಪಟ್ಟ ಮಾರ್ಗಗಳಲ್ಲಿ ಪ್ರಸಕ್ತ ವರ್ಷದ ಶಾಲಾ, ಕಾಲೇಜು ಪ್ರವೇಶ ದಾಖಲಾತಿ ಅಥವಾ ಶಾಲಾ ಶುಲ್ಕ ಪಾವತಿಸಿದ ರಶೀದಿ ತೋರಿಸಿ ಸಂಸ್ಥೆಯ ನಗರ, ಹೊರವಲಯ, ಸಾಮಾನ್ಯ ಹಾಗೂ ವೇಗದೂತ ಬಸ್ಸುಗಳಲ್ಲಿ ತಾತ್ಕಾಲಿಕವಾಗಿ ಸೆ. 15ರ ವರೆಗೆ ಉಚಿತವಾಗಿ ಪ್ರಯಾಣಿಸಲು ವಿದ್ಯಾರ್ಥಿಗಳಿಗೆ ಅವಕಾಶ ಕಲ್ಪಿಸಲಾಗಿದೆ. 2021-22ನೇ ಸಾಲಿನ ಪಾಸ್‍ಗಳಿಗಾಗಿ ಸೇವಾ ಸಿಂಧು ಆನ್‍ಲೈನ್ ಪೆÇೀರ್ಟಲ್ ಮೂಲಕ ಅರ್ಜಿ ಸಲ್ಲಿಸಿ ಹೊಸ ಪಾಸ್‍ಗಳನ್ನು ಪಡೆಯಬಹುದಾಗಿದೆ ಎಂದು ವಾಕರಸಾ ಕೇಂದ್ರ ಕಚೇರಿಯ ಸಾರ್ವಜನಿಕ ಸಂಪರ್ಕಾಧಿಕಾರಿ ತಿಳಿಸಿದ್ದಾರೆ.
+