• Slide
    Slide
    Slide
    previous arrow
    next arrow
  • ಸೆ. 3, 4ಕ್ಕೆ ಕದಂಬದಲ್ಲಿ ‘ಕೈ ಚಕ್ಕುಲಿ ಕಂಬಳ’

    300x250 AD

    ಶಿರಸಿ: ಕದಂಬ ಮಾರ್ಕೇಟಿಂಗ್ ಸೌಹಾರ್ದ ಸಹಕಾರಿಯು ಸೆ. 3, 4 ರಂದು ಮಧ್ಯಾಹ್ನ 3 ರಿಂದ 6 ಗಂಟೆವರೆಗೆ ‘ಕೈ ಚಕ್ಕುಲಿ ಕಂಬಳ’ ವನ್ನು ಸಂಸ್ಥೆ ಆವಾರದಲ್ಲಿ ಆಯೋಜಿಸಿದೆ.

    ಮಲೆನಾಡಿನ ಪ್ರಾದೇಶಿಕ ಸೊಗಡಿನಲ್ಲೊಂದಾದ ಕೈ ಚಕ್ಕುಲಿಯ ರುಚಿ ವಿಶೇಷವಾದದ್ದು. ಬಹಳ ನಾಜೂಕಿನ ಅತಿವಿರಳ ಕಲೆಯಾದ ಕೈ ಚಕ್ಕುಲಿಯ ತಯಾರಿಸುವುದು ಬಹಳ ಹಳೆಯ ಸಂಪ್ರದಾಯ. ಆದರೆ ಅದರ ತಯಾರಿಕೆ ಮರೆಯಾಗುತ್ತಿರುವ ಕಾರಣ ಈ ತಿನಿಸಿನ ಮಹತ್ವ ಅನೇಕರಿಗೆ ತಿಳಿದಿಲ್ಲ. ಆದ್ದರಿಂದ ಬರೀ ಕೈಯಿಂದಲೇ ಚಕ್ಕುಲಿ ತಯಾರಿಸುವದನ್ನು ತರಬೇತಿ ರೂಪದಲ್ಲಿ ಆಸಕ್ತರಿಗೆ ಕಲಿಸುವ ಉದ್ದೇಶದಿಂದ ‘ಕೈ ಚಕ್ಕುಲಿ ಕಂಬಳ’ ಏರ್ಪಡಿಸಲಾಗಿದೆ.

    300x250 AD

    ರುಚಿ ಹಾಗೂ ಬಾಳಿಕೆ ಜಾಸ್ತಿಯಿರುವ ಚಕ್ಕುಲಿಗೆ ಮಾರುಕಟ್ಟೆ ಒದಗಿಸುವ ಕೆಲಸವನ್ನೂ ಸಂಸ್ಥೆಯಿಂದಲೇ ಮಾಡಲಾಗುವದು. ಕೈ ಚಕ್ಕುಲಿಯೊಂದಿಗೆ ಬೇರೆ-ಬೇರೆ ಹಿಟ್ಟು, ಸಂಬಾರ ಪದಾರ್ಥಗಳನ್ನು ಉಪಯೋಗಿಸಿ ಉಪಕರಣದ ಮೂಲಕ ತಯಾರಿಸಿದ ಚಕ್ಕುಲಿಯ ಸ್ಪರ್ಧೆಯೂ ಇರಲಿದೆ. ಸ್ಪರ್ಧೆಯಲ್ಲಿ ಭಾಗವಹಿಸುವ ಅಭ್ಯರ್ಥಿಗಳು ಮುಂಚಿತವಾಗಿ ಹೆಸರನ್ನು ನೋದಾಯಿಸಿಕೊಳ್ಳಬೇಕು. ಆಸಕ್ತರು ಹೆಚ್ಚಿನ ಮಾಹಿತಿಗೆ ಮತ್ತು ಹೆಸರು ನೋಂದಣಿಗೆ ಶ್ರೀವತ್ಸ ಹೆಗಡೆ ಮೊ. 9535502274, ಕದಂಬ ಮಾರ್ಕೆಟಿಂಗ್ 08384233163 ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.

    Share This
    300x250 AD
    300x250 AD
    300x250 AD
    Leaderboard Ad
    Back to top