ಯಲ್ಲಾಪುರ: ಆಯುಷ್ಮಾನ್ ಭವ, ವಿಜಯೀ ಭವ ಸಂಘಟನೆಯಿಂದ ತಾಲೂಕಿನ ಉಪಳೇಶ್ವರದ ದಾನ್ಯಾನಕೊಪ್ಪದ ಸುಬ್ರಾಯ ನಾರಾಯಣ ಭಟ್ ಇವರ ಮನೆಯ ಪರಿಸರದಲ್ಲಿ ನವಗ್ರಹ ವನ ಮತ್ತು ಕುಟುಂಬವನ ನಿರ್ಮಾಣ ಕಾರ್ಯಕ್ರಮ ನಡೆಯಿತು.
ಸುಬ್ರಾಯ ಭಟ್ ಭೂಮಿ ಪೂಜೆ ಮತ್ತು ವೃಕ್ಷಪೂಜೆಯನ್ನು ಮಾಡಿ ನವಗ್ರಹ ವೃಕ್ಷಗಳನ್ನು ಆರೋಪಣ ಮಾಡಿದರು. ಕುಟುಂಬದ ಸದಸ್ಯರೆಲ್ಲರೂ ತಮ್ಮ ನಕ್ಷತ್ರ, ರಾಶಿಗೆ ಸಂಬಂಧಪಟ್ಟ ವೃಕ್ಷಗಳನ್ನು ನೆಡುವುದರ ಮೂಲಕ ಕುಟುಂಬ ವನ ನಿರ್ಮಾಣ ಕಾರ್ಯವೂ ನೆರವೇರಿತು.
ಸಂಘಟನೆಯ ಸಂಚಾಲಕ ಮಂಜುನಾಥ ಭಟ್ ಭಟ್ರಕೇರಿ ಇವರು ವನ ನಿರ್ಮಾಣದ ಮಹತ್ವ ಮತ್ತು ಅಗತ್ಯತೆಯನ್ನು ವಿವರಿಸಿದರು, ವೆಂಕಟ್ರಮಣ ಭಟ್ ದೇವಿಗದ್ದೆ ಪೂಜೆನೆರವೇರಿಸಿದರು.