Slide
Slide
Slide
previous arrow
next arrow

ಜೂಜು ಅಡ್ಡೆ ಮೇಲೆ ಪೊಲೀಸ್ ದಾಳಿ; 20 ಆರೋಪಿಗಳ ಬಂಧನ

300x250 AD

ಶಿರಸಿ: ಇಸ್ಪೀಟ್ ಅಡ್ಡೆ ಮೇಲೆ ದಾಳಿ ನಡೆಸಿದ ಶಿರಸಿ ಪೆÇಲೀಸರು ಬರೋಬ್ಬರಿ 87,205 ರೂ ಹಾಗೂ 20 ಆರೋಪಿಗಳನ್ನು ಬಂಧಿಸಿರುವ ಘಟನೆ ತಾಲೂಕಿನ ಬೊಪ್ಪನಹಳ್ಳಿಯಲ್ಲಿ ನಡೆದಿದೆ.

ತಾಲೂಕಿನ ಬೊಪ್ಪನಹಳ್ಳಿಯ ಸಾರ್ವಜನಿಕ ಸ್ಥಳದಲ್ಲಿ ಅಕ್ರಮವಾಗಿ ಇಸ್ಪೀಟ್ ಆಡುತ್ತಿರುವುದರ ಬಗ್ಗೆ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಶಿರಸಿ ಗ್ರಾಮೀಣ ಠಾಣೆ ಪೆÇಲೀಸರು ಆರೋಪಿಗಳನ್ನು ಹಾಗೂ ಆಟಕ್ಕೆ ಬಳಸುತ್ತಿದ್ದ ಉಪಕರಣಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

300x250 AD

ಈ ಕಾರ್ಯಾಚರಣೆಯು ಶಿರಸಿ ಡಿವೈಎಸ್ಪಿ ರವಿ ನಾಯ್ಕ ಅವರ ಮಾರ್ಗದರ್ಶನದಲ್ಲಿ ಸಿಪಿಐ ರಾಮಚಂದ್ರ ನಾಯಕ ರವರ ನೇತೃತ್ವದಲ್ಲಿ ನಗರ ಠಾಣೆ ಪಿಎಸ್‍ಐ ರಾಜಕುಮಾರ್ ಉಕ್ಕಲಿ, ಗ್ರಾಮೀಣ ಠಾಣೆ ಪಿ ಎಸ್ ಐ ಶಾಮ್ ವಿ ಪವಸ್ಕರ್, ಎ ಎಸ್ ಐ ರಮೇಶ್ ನಾಯಕ್, ಸಿಬ್ಬಂದಿಗಳಾದ ಗಣಪತಿ ಎಸ್ ಪಟಗಾರ, ಪ್ರಶಾಂತ್ ಪವಸ್ಕರ್, ಅರುಣ ಲಮಾಣಿ, ಪ್ರವೀಣ್ ಎನ್, ಸುಭಾಷ ಸಾಲ ಮಂಟಪ, ಮಂಜುನಾಥ್ ಕಾಶಿ ಕೋವಿ, ಜಿಮ್ಮು ಶಿಂದೆ, ಸುಮಂತ್ ನಾಯ್ಕ, ಪಾಂಡು ನಾಗೋಜಿ ಇವರುಗಳು ದಾಳಿಯಲ್ಲಿ ಪಾಲ್ಗೊಂಡಿದ್ದರು. ಈ ಬಗ್ಗೆ ಶಿರಸಿ ಗ್ರಾಮೀಣ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೆÇಲೀಸರು ತನಿಖೆ ನಡೆಸುತ್ತಿದ್ದಾರೆ.

Share This
300x250 AD
300x250 AD
300x250 AD
Back to top