• Slide
    Slide
    Slide
    previous arrow
    next arrow
  • ಕಂಟೇನರ್ ಲಾರಿ-ಬಸ್ ಮುಖಾಮುಖಿ; ಹಲವರಿಗೆ ಗಂಭೀರ ಗಾಯ

    300x250 AD

    ಅಂಕೋಲಾ: ಇಲ್ಲಿನ ಎಪಿಎಂಸಿ ಮೈದಾನದ ಪಕ್ಕದ ಪೆಟ್ರೋಲ್ ಪಂಪ್ ಎದುರು ಮೀನು ತುಂಬಿದ ಕಂಟೇನರ್ ಲಾರಿ ಹಾಗೂ ಕೆಎಸ್‍ಆರ್‍ಟಿಸಿ ಬಸ್ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ, ಲಾರಿ ಪಲ್ಟಿಯಾಗಿ ಬಿದ್ದು, ಮೀನುಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿದೆ.

    ಕೇರಳದಿಂದ ಗೋವಾಕ್ಕೆ ಮೀನು ಸಾಗಿಸುತ್ತಿದ್ದ ಬೃಹತ್ ಗಾತ್ರದ ಕಂಟೇನರ್ ಲಾರಿಯನ್ನು ಚಾಲಕ ಕಾರವಾರ ಮಾರ್ಗವಾಗಿ ಹೋಗುತ್ತಿದ್ದ ವೇಳೆ, ಹುಬ್ಬಳ್ಳಿ ಕಾರವಾರ ಬಸ್ ನಡುವೆ ಡಿಕ್ಕಿ ಸಂಭವಿಸಿದೆ ಎಂದು ತಿಳಿದಿದೆ. ಈ ಅಪಘಾತಕ್ಕೆ ರಾಂಗ್ ರೂಟ್ ನಲ್ಲಿ ಬಂದ ಬಸ್ ಡ್ರೈವರ್ ಅಜಾಗರೂಕತೆಯೇ ಕಾರಣ ಎಂದು ಸ್ಥಳೀಯರು ಹೇಳುತ್ತಿದ್ದಾರೆ.

    ಅಪಘಾತವನ್ನು ತಪ್ಪಿಸಲು ಲಾರಿ ಚಾಲಕ ಪ್ರಯತ್ನಪಟ್ಟಿದ್ದು ಕೊನೆಗೂ ಗಾಡಿ ನಿಯಂತ್ರಣಕ್ಕೆ ಬರದೇ ಹೆದ್ದಾರಿ ಅಂಚಿನ ಇಳಿಜಾರಿನಲ್ಲಿ ಪಲ್ಟಿಯಾಗಿದೆ. ಪಲ್ಟಿಯಾದ ರಭಸಕ್ಕೆ ಲಾರಿ ನಜ್ಜುಗುಜ್ಜಾಗಿದ್ದು, ಲಕ್ಷಾಂತರ ರೂ ಮೌಲ್ಯದ ಮೀನು ಚೆಲ್ಲಾಪಿಲ್ಲಿ ಆಗಿದೆ.

    300x250 AD

    ಇದೇ ವೇಳೆ ಹೆದ್ದಾರಿ ಅಂಚಿಗೆ ನಿಲ್ಲಿಸಿಟ್ವ ಬೈಕೊಂದು ಲಾರಿ ಅಡಿ ಸಿಲುಕಿ ಜಖಂಗೊಂಡಿದೆ. ಕಂಟೈನರ್ ಲಾರಿಯ ಒಂದು ಭಾಗ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದಿದೆ. ಲಾರಿಯಲ್ಲಿ ಸಿಲುಕಿಕೊಂಡಿದ್ದ ಚಾಲಕನ ರಕ್ಷಣಾ ಕಾರ್ಯದಲ್ಲಿ ಅಗ್ನಿಶಾಮಕ ದಳದ ಸಿಬ್ಬಂದಿಗಳು ಕರ್ತವ್ಯ ನಿರ್ವಹಿಸಿದರು.

    ಗಂಭೀರ ಗಾಯಗೊಂಡ ಲಾರಿ ಚಾಲಕನನ್ನು ಅಂಬುಲೆನ್ಸ್ ಮೂಲಕ ಆಸ್ಪತ್ರೆಗೆ ಸಾಗಿಸಿಲಾಗಿದೆ. ಬಸ್ ಚಾಲಕನಿಗೂ ಗಾಯಗಳಾಗಿದೆ. ಕೆಲ ಪ್ರಯಾಣಿಕರಿಗೂ ಚಿಕ್ಕ ಪುಟ್ಟ ಗಾಯಗಳಿಗಿದೆ ಎನ್ನಲಾಗಿದೆ. ಐಆರ್‍ಬಿ, 112 ಈ ಆರ್‍ಎಸ್‍ಎಸ್ ವಾಹನದ ಸಿಬ್ಬಂದಿಗಳು ಹೆದ್ದಾರಿ ವ್ಯವಸ್ಥೆ ಸುಗಮ ಗೊಳಿಸಿ ಸಂಚಾರಕ್ಕೆ ಅನುಕೂಲ ಮಾಡಿಕೊಟ್ಟರು.

    Share This
    300x250 AD
    300x250 AD
    300x250 AD
    Leaderboard Ad
    Back to top