ಸಿದ್ದಾಪುರ: ತಾಲೂಕಿನಲ್ಲಿ ಗುರುವಾರ ಕೊರೊನಾ ಲಸಿಕೆ ಲಭ್ಯವಿದ್ದು, ಸಾರ್ವನಿಕರು ಇದರ ಪ್ರಯೋಜನ ಪಡೆದುಕೊಳ್ಳಬೇಕು ಎಂದು ಆರೋಗ್ಯಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಎಲ್ಲಿ ಎಷ್ಟು ಡೋಸ್ ಲಸಿಕೆ ಲಭ್ಯ: ಆವರಗೊಪ್ಪ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 300 ಡೋಸ್, ಬಿದ್ರಕಾನ್ ಗ್ರಾ.ಪಂ ಸಭಾಭವನದಲ್ಲಿ 300, ಕಿರಿಯ ಪ್ರಾ.ಶಾಲೆ ಹಂಜಗಿಯಲ್ಲಿ 300, ಕೊಂಡ್ಲಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 4 ಮತ್ತು 7ನೇ ವಾರ್ಡ್‍ನವರಿಗೆ 300 ಡೋಸ್, ಸಿದ್ದಾಪುರದ ಬಾಲ ಭವನದಲ್ಲಿ 150 ಡೋಸ್ ಲಭ್ಯವಿದ್ದು, ಇಲ್ಲಿ ಹಾಲು ಒಕ್ಕೂಟದ ನೌಕರರು, ವಿಕಲಚೇತನರಿಗೆ, ನ್ಯಾಯಾಲಯದ ವಕೀಲರಿಗೆ, ಸಿಬ್ಬಂದಿಗಳಿಗೆ 2ನೇ ಡೋಸ್ ಮಾತ್ರ ನೀಡಲಾಗುತ್ತದೆ. ಮಳವಳ್ಳಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ 100, ಹಾರೆಕೊಪ್ಪ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 200, ಕೊರ್ಲಕೈ ಗ್ರಾ.ಪಂ ಸಭಾಭವನದಲ್ಲಿ 100, ಹಿರಿಯ ಪ್ರಾಥಮಿಕ ಶಾಲೆ ಬಾಳೇಸರದಲ್ಲಿ 200, ಹೆಗ್ಗರಣಿ ಗ್ರಾ.ಪಂ ಸಭಾಭವನದಲ್ಲಿ 200, ಕಾನಸೂರು ಸಭಾಭವನದಲ್ಲಿ 100, ಮುಠ್ಠಳ್ಳಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ 350 ಡೋಸ್, ಹುಲ್ಲುಕುತ್ರಿ ಶಾಲೆಯಲ್ಲಿ 300, ಹೊಸಮಂಜು ಶಾಲೆಯಲ್ಲಿ 200, ದೊಟ್ಮನೆ ಗ್ರಾ.ಪಂ ಸಭಾಭವನದಲ್ಲಿ 200 ಡೋಸ್ ಲಸಿಕೆ ಲಭ್ಯವಿದೆ ಎಂದು ಆರೋಗ್ಯಾಧಿಕಾರಿಗಳು ತಿಳಿಸಿದ್ದಾರೆ.