ಯಲ್ಲಾಪುರ: ಪಟ್ಟಣದ ವಿಶ್ವದರ್ಶನ ಪ್ರೌಢಶಾಲೆಯ ಆವರಣದಲ್ಲಿ ಆ.30 ರಿಂದ 10 ದಿನಗಳ ಕಾಲ ‘ವಿಶ್ವದರ್ಶನ ಕ್ರಿಯಾ ಶಿಬಿರ’ ನಡೆಸಲಾಗುತ್ತದೆ ಎಂದು ವಿಶ್ವದರ್ಶನ ಶಿಕ್ಷಣ ಸಂಸ್ಥೆಯ ಆಡಳಿತ ಮಂಡಳಿ ತಿಳಿಸಿದೆ.
ಬೆಳಗ್ಗೆ 6.15ರಿಂದ 7.15ರ ವರೆಗೆ ಈ ಶಿಬಿರ ನಡೆಯಲಿದೆ. ಆರೋಗ್ಯವಂತ ಜೀವನ ನಡೆಸಲು ಪ್ರತಿಯೊಬ್ಬರಿಗೂ ಅಗತ್ಯವಿರುವ ಯೋಗ ಹಾಗೂ ಪ್ರಾಣಾಯಾಮವನ್ನು ಈ ಶಿಬಿರದಲ್ಲಿ ಅಭ್ಯಾಸ ಮಾಡಿಸಲಾಗುತ್ತದೆ. ವಿಶ್ವದರ್ಶನ ಸೇವಾ ತಂಡದ ಆಶ್ರಯದಲ್ಲಿ ಯೋಗ ಕಾರ್ಯಕ್ರಮ ನಡೆಯಲಿದೆ. ಯೋಗ ಶಿಕ್ಷಕರಾದ ಸುಬ್ರಾಯ ಭಟ್ಟ ತರಬೇತಿ ನೀಡಲಿದ್ದಾರೆ. ಶಿಬಿರದಲ್ಲಿ ಭಾಗವಹಿಸಲು ಆಸಕ್ತಿ ಇರುವವರು 8747017169 ಅಥವಾ 9886085046ಗೆ ಸಂಪರ್ಕಿಸಿ ಹೆಸರು ನೋಂದಾಯಿಸಿಕೊಳ್ಳುವಂತೆ ಪ್ರಕಟಣೆ ತಿಳಿಸಿದೆ.