ಶಿರಸಿ: ಭೂಮಿಪುತ್ರಿ ಮತ್ತು ಅರೇಕಾಪೋಟ್ ಸಂಸ್ಥೆಗಳ ಸಹಯೋಗದಲ್ಲಿ ಮಲೆನಾಡು ಶಿಕ್ಷಣ ಮತ್ತು ಗ್ರಾಮೀಣ ಅಭಿವೃದ್ಧಿ ಸಂಸ್ಥೆ ಶಿರಸಿ ಇವರು ಸಂಘಟಿಸಿರುವ ‘ಕೈದೋಟ’ ಕಲಿಕೆಗಳ ಆಗರ ಈ ಕಾರ್ಯಕ್ರಮದ ಉದ್ಘಾಟನಾ ಸಮಾರಂಭ ಆ.26 ರಂದು ಚಂದನ ಆಂಗ್ಲ ಮಾಧ್ಯಮ ಶಾಲೆ ನರೇಬೈಲ್ ನಲ್ಲಿ ನಡೆಯಲಿದೆ.
ಮನುವಿಕಾಸ ಸಂಸ್ಥೆ ಶಿರಸಿಯ ಗಣಪತಿ ಭಟ್ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಮಿಯಾಡ್ರ್ಸ ಶಿರಸಿಯ ಅಧ್ಯಕ್ಷ ಎಸ್ ಆರ್ ಹೆಗಡೆ ಅಧ್ಯಕ್ಷತೆ ವಹಿಸುವರು. ಮುಖ್ಯ ಅತಿಥಿಗಳಾಗಿ ಎ.ಪಿ.ಎಂ.ಸಿ ಶಿರಸಿಯ ಉಪಾಧ್ಯಕ್ಷ ಸವಿತಾ ಹೆಗಡೆ ಆಗಮಿಸುವರು. ಮಿಯಾಡ್ರ್ಸ ಶಿರಸಿಯ ಕಾರ್ಯದರ್ಶಿ ಎಲ್ ಎಂ ಹೆಗಡೆ ಮತ್ತು ಚಂದನ ಆಂಗ್ಲ ಮಾಧ್ಯಮ ಶಾಲೆ ನರೇಬೈಲ್ ಆಡಳಿತಾಧಿಕಾರಿಣಿ ವಿದ್ಯಾ ನಾಯ್ಕ್ ಗೌರವ ಉಪಸ್ಥಿತಿಯಲ್ಲಿ ಕಾರ್ಯಕ್ರಮ ನಡೆಯಲಿದೆ.
ವಿದ್ಯಾರ್ಥಿಗಳಲ್ಲಿ ಪರಿಸರದ ಕುರಿತು ಕುತೂಹಲ ಹುಟ್ಟಿಸುವ ಉದ್ದೇಶದೊಂದಿಗೆ ಶಶಿಧರ್ ಭಟ್ ದೆಹಲಿ ಈ ಯೋಜನೆ ರೂಪಿಸಿದ್ದು ಪ್ರತೀ ವಿದ್ಯಾರ್ಥಿಗೂ ಅಡಿಕೆ ಮರದಿಂದ ತಯಾರಿಸಿದ ಒಂದು ಕುಂಡವನ್ನು ನೀಡಿ ಆ ಕುಂಡದಲ್ಲಿ ವಿದ್ಯಾರ್ಥಿಯು ಗಿಡ ಬೆಳಸಿ 21 ವಾರಗಳ ಕಾಲ ಪೋಷಿಸುವ ಸ್ಫರ್ದೆ ಇದಾಗಿದೆ ಎಂದು ವಿವರಿಸಿದರು.