ಶಿರಸಿ: ಉತ್ತರಕನ್ನಡ ಜಿಲ್ಲೆಯಲ್ಲಿ ಆ.26 ಗುರುವಾರ ಒಟ್ಟು 42,200 ಕೋವಿಶೀಲ್ಡ್ ಲಸಿಕೆ ಲಭ್ಯವಿದ್ದು, ಪ್ರಥಮ ಮತ್ತು ದ್ವಿತೀಯ ಡೋಸ್ ಪಡೆದುಕೊಳ್ಳುವವರು ಪಡೆದುಕೊಳ್ಳಬಹುದಾಗಿದೆ ಎಂದು ಆರೋಗ್ಯಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಜಿಲ್ಲೆಯ ಎಲ್ಲೆಲ್ಲಿ ಎಷ್ಟು ಡೋಸ್ ಲಸಿಕೆ?: ಅಂಕೋಲಾದಲ್ಲಿ 2,500, ಭಟ್ಕಳ 4 ಸಾವಿರ, ಹಳಿಯಾಳ 2 ಸಾವಿರ, ಹೊನ್ನಾವರ 5,600, ಜೋಯ್ದಾ 2 ಸಾವಿರ, ಕಾರವಾರ 1,200, ಮುಂಡಗೋಡ 4 ಸಾವಿರ, ಕುಮಟಾ 5,600, ಶಿರಸಿ 7 ಸಾವಿರ, ಸಿದ್ದಾಪುರ 3,500, ಯಲ್ಲಾಪುರ 2,500, ದಾಂಡೇಲಿ 1,400, ನೇವಿ 300 ಮತ್ತು ಜಿಲ್ಲಾಸ್ಪತ್ರೆಯಲ್ಲಿ 600 ಕೋವಿಶೀಲ್ಡ್ ಲಸಿಕೆ ಲಭ್ಯವಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಶಿರಸಿಯಲ್ಲಿ ಎಲ್ಲೆಲ್ಲಿ ಲಸಿಕೆ ಲಭ್ಯ: ಕೊಳಗಿಬೀಸ್ 500, ದೇವನಳ್ಳಿ 700, ವಡ್ಡಳ್ಳಾ 350, ಅಂಡಗಿ 350, ಕುಳವೆ 500, ಕಾಯಿಗುಡ್ಡೆಯಲ್ಲಿ 300, ಬೈರುಂಭೆಯಲ್ಲಿ 600, ಮೇಲಿನ ಓಣಿಕೇರಿ 500, ಎಸಳೆ 400, ಬಿಸಲಕೊಪ್ಪ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ 300, ಇಕ್ರಾ ಎಜುಕೇಶನ್ ಟ್ರಸ್ಟ್ ಮುಸ್ಲಿಂ ಗಲ್ಲಿಯಲ್ಲಿ 900, ರಾಮನಬೈಲಿನಲ್ಲಿ 500, ಕೆಎಂಎಫ್ ಅಗಸೇಬಾಗಿಲು 400, ತಿಗಣಿ 300, ಮಧುರವಳ್ಳಿಯಲ್ಲಿ 300 ಡೋಸ್ ಲಸಿಕೆ ಲಭ್ಯವಿದೆ.
ಅಂಕೋಲಾದ ಎಲ್ಲೆಲ್ಲಿ ಲಸಿಕೆ ಲಭ್ಯ: ಗುರುವಾರ ಒಟ್ಟೂ 2500 ಡೋಸ್ ಕೋವಿಡ್ ಲಸಿಕೆಗಳ ವಿತರಣೆಗೆ ಆರೋಗ್ಯ ಇಲಾಖೆ ಕ್ರಮ ಕೈಗೊಂಡಿದೆ. ವಾಡಿಬೊಗ್ರಿ 350, ಶಿರೂರು 220, ಅಗಸೂರು 200, ರಾಮನಗಳಿ 250, ಬೃಹ್ಮೂರು 450, ಕಸಭಾ ಕೇಣಿ 300, ಹಾರವಾಡ 430 ವ್ಯಾಪ್ತಿಯಲ್ಲಿ ಗುರುವಾರ ಲಸಿಕಾಕರಣ ನಡೆಯಲಿದೆ.