• first
    second
    third
    previous arrow
    next arrow
  • ಸಾಂತ್ವನ ಮಹಿಳಾ ವೇದಿಕೆ ನೂತನ ಪದಾಧಿಕಾರಿಗಳ ಆಯ್ಕೆ; ಅಧ್ಯಕ್ಷರಾಗಿ ಜ್ಯೋತಿ ಭಟ್ ಆಯ್ಕೆ

    300x250 AD

    ಶಿರಸಿ: ಶಿರಸಿಯ ಸಾಂತ್ವನ ಮಹಿಳಾ ವೇದಿಕೆಯ ನೂತನ ಅಧ್ಯಕ್ಷರಾಗಿ ಜ್ಯೋತಿ ವಿ.ಭಟ್, ಉಪಾಧ್ಯಕ್ಷರಾಗಿ ಸಂಧ್ಯಾ ಕುರುಡೇಕರ್, ಕಾರ್ಯದರ್ಶಿಯಾಗಿ ಶೈಲಜಾ ಗೋರನ್ಮನೆ, ಖಜಾಂಚಿಯಾಗಿ ಮಧುಮತಿ ಹೆಗಡೆ ಆಯ್ಕೆಯಾಗಿದ್ದಾರೆ.

    ಆ.23 ರಂದು ವೇದಿಕೆಯ ಕಚೇರಿ ಆವಾರದಲ್ಲಿ ನಡೆದ, 2020- 21 ನೆಯ ಸಾಲಿನ ಸರ್ವಸಾಧಾರಣ ಸಭೆಯಲ್ಲಿ ನೂತನ ಆಡಳಿತ ಮಂಡಳಿ ರಚಿಸಿ ಪದಾಧಿಕಾರಿಗಳ ಆಯ್ಕೆ ಮಾಡಲಾಯಿತು. ಸಹಕಾರ್ಯದರ್ಶಿಯಾಗಿ ರಾಜಲಕ್ಷ್ಮಿ ಹೆಗಡೆ ಹಾಗೂ ಆಡಳಿತ ಮಂಡಳಿಯ ಸದಸ್ಯರಾಗಿ, ಸಾಂತ್ವನ ಮಹಿಳಾ ವೇದಿಕೆಯ ಸ್ಥಾಪಕಿ ಡಾ.ವಿಜಯನಳಿನಿ ರಮೇಶ, ಗೌರವಾಧ್ಯಕ್ಷೆ ಬಿ ಕೆ ವೀಣಾಜಿ, ಫ್ಲಾವಿಯಾ ಜಗದೀಶ ಹೊನ್ನಾವರ, ಡಾ. ಶಾಂತಾ ಭಟ್ಟ ಸರ್ವಾನುಮತದಿಂದ ಆಯ್ಕೆಯಾದರು.

    300x250 AD

    ಇದೇ ಸಂದರ್ಭದಲ್ಲಿ, ಸಾಂತ್ವನ ಮಹಿಳಾ ವೇದಿಕೆಗೆ ಸರಕಾರದಿಂದ ನೀಡಲಾಗಿದ್ದ ‘ಸಾಂತ್ವನ ಮಹಿಳಾ ಸಹಾಯವಾಣಿಯನ್ನು’ ಸರಕಾರದಿಂದ ಸ್ಪಷ್ಟ ಆದೇಶ ಬರುವವರೆಗೂ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲು ನಿಶ್ಚಯಿಸಲಾಯಿತು. 2021 ಏಪ್ರಿಲ್ 24 ರಂದು ಸರಕಾರದಿಂದ ಶಿರಸಿಯನ್ನೂ ಸೇರಿ ಜಿಲ್ಲೆಯ ಮೂರು ಸಹಾಯವಾಣಿಗಳನ್ನು ರದ್ದುಗೊಳಿಸಿರುವ ಆದೇಶ ಬಂದಿತ್ತು.

    ಆದರೂ ಸಹಾಯವಾಣಿಯನ್ನು ಮುಂದುವರೆಸುವ ಕುರಿತು ಜನಪ್ರತಿಗಳ ಭರವಸೆಯ ಹಿನ್ನೆಲೆಯಲ್ಲಿ ಹಾಗೂ ನೊಂದು ಬರುವ ಮಹಿಳೆಯರಿಗೆ ಸಾಂತ್ವನ ನೀಡುವ ನೆಲೆಯಲ್ಲಿ ಸುಮಾರು 4 ತಿಂಗಳುಗಳ ಕಾಲ ಸಹಾಯವಾಣಿಯನ್ನು ಊರ್ಜಿತದಲ್ಲಿ ಇಡಲಾಗಿತ್ತು. ಈ ಸಂದರ್ಭದಲ್ಲಿ ಸಹಾಯ ಯಾಚಿಸುವ ಮಹಿಳೆಯರ ನೆರವಿಗೆ ಸಾಂತ್ವನ ಮಹಿಳಾ ವೇದಿಕೆಯ ಮೂಲಕ ಸ್ಪಂದಿಸುವ ತೀರ್ಮಾನ ಕೈಗೊಳ್ಳಲಾಯಿತು.

    Share This
    300x250 AD
    300x250 AD
    300x250 AD
    Leaderboard Ad
    Back to top