ಅಂಕೋಲಾ: ಅಂಕೋಲಾ-ಹುಬ್ಬಳ್ಳಿ ಮಾರ್ಗದ ಹೆಬ್ಬುಳ ಬಳಿ ಟಾಟಾ ಟಿಯಾಗೋ ಕಾರ್ ರಸ್ತೆ ಅಪಘಾತದಲ್ಲಿ ಸಂಪೂರ್ಣ ಸುಟ್ಟು ಕರಕಲಾದ ಘಟನೆ ನಡೆದಿದೆ.
ಧಾರವಾಡದಿಂದ ಕುಮಟಾಕ್ಕೆ ತೆರಳುತ್ತಿದ್ದ ಈ ವಾಹನ ಹೆಬ್ಬುಳ ಬಳಿ ಚಾಲಕನ ನಿಯಂತ್ರಣ ತಪ್ಪಿರಸ್ತೆಯಂಚಿನ ವಿದ್ಯುತ್ ಕಂಬದ ಬಳಿ ಹೊರಳಿದ ಪರಿಣಾಮ ಅದಾವುದೋ ಕಾರಣದಿಂದ ಆಕಸ್ಮಿಕ ಬೆಂಕಿ ಹತ್ತಿಕೊಂಡಿರುವ ಸಾಧ್ಯತೆ ಕೇಳಿ ಬಂದಿದೆ. ಅದೃಷ್ಟವಶಾತ್ ಕಾರ್ ಚಾಲಕನಿಗೆ ಯಾವುದೇ ತೊಂದರೆಯಾಗಿಲ್ಲ. ಸುದ್ದಿ ತಿಳಿದ ಅಗ್ನಿಶಾಮಕ ದಳದ ಸಿಬ್ಬಂದಿಗಳು ಸ್ಥಳಕ್ಕೆ ಆಗಮಿಸಿ ಬೆಂಕಿ ನಂದಿಸುವ ಪ್ರಯತ್ನ ನಡೆಸಿದ್ದರು.
ಬುಧವಾರ ಬೆಳಿಗ್ಗೆ ನಡೆದ ಈ ರಸ್ತೆ ಅವಘಡದಿಂದ ರಾಷ್ಟ್ರೀಯ ಹೆದ್ದಾರಿ ಸಂಚಾರದಲ್ಲಿ ಕೆಲಕಾಲ ವ್ಯತ್ಯಯವಾಗಿತ್ತು. ಸ್ಥಳೀಯ ಅರಣ್ಯ ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿಗಳು, ಪೆÇಲೀಸ್ ಹಾಗೂ ಇತರರು ಹಾಜರಿದ್ದು, ಸಂಚಾರ ಸುರಕ್ಷತೆಗೆ ಒತ್ತು ನೀಡಿದರು.