ಶಿರಸಿ: ಸಾರ್ವಜನಿಕರಿಗೆ ನಕಲಿ ರೇಷನ್ ಕಾರ್ಡ್ ಮಾಡಿಕೊಡುತ್ತಿದ್ದ ಅಂಗಡಿ ಮೇಲೆ ದಾಳಿ ಮಾಡಿದ ಪೊಲೀಸರು ಓರ್ವನನ್ನು ಬಂಧಿಸಿದ್ದಾರೆ.
ಶಿರಸಿ ಪೌರಾಯುಕ್ತ ಕೇಶಚ ಚೌಗುಲೆ ನೀಡಿದ ದೂರಿನ ಮೇರೆಗೆ ದಾಳಿ ನಡೆಸಿದ ಸಿಪಿಐ ರಾಮಚಂದ್ರ ನಾಯಕ ನೇತೃತ್ವದ ತಂಡ ಆರೋಪಿ ಸಯ್ಯದ ಮುಜಮೀರ್ ಮನ್ಸೂರನ್ನು ಬಂಧಿಸಿದ್ದಾರೆ. ಆರೋಪಿತನು ನಕಲಿ ರೇಶನ್ ಕಾರ್ಡ್, ಜನನ-ಮರಣ ಪ್ರಮಾಣ ಪತ್ರ ಮಾಡಿಕೊಡುತ್ತಿದ್ದ ಎಂದು ತಿಳಿದ ಹಿನ್ನೆಲೆಯಲ್ಲಿ ಆರೋಪಿ ಬಂಧನಕ್ಕೆ ತಂಡ ರಚಿಸಿ ಕಾರ್ಯಾಚರಣೆ ನಡೆಸುತ್ತಿದ್ದರು. ಈ ವೇಳೆ ಪಿಎಸ್‍ಐ ರಾಜಕುಮಾರ ಕೈಗೆ ಆರೋಪಿ ಸಿಕ್ಕಿ ಹಾಕಿಕೊಂಡಿದ್ದು, ಕಾರ್ಯಾಚರಣೆ ನಡೆಸುತ್ತಿದ್ದಾರೆ.