ಯಲ್ಲಾಪುರ: ತಾಲೂಕಿನಲ್ಲಿ ಆ.25 ಬುಧವಾರ 320 ಡೋಸ್ ಕೊರೊನಾ ಲಸಿಕೆ ಲಭ್ಯವಿದೆ ಎಂದು ಆರೋಗ್ಯಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಲಭ್ಯವಿರುವ 320 ಡೋಸ್ ಲಸಿಕೆಯನ್ನು ತಾಲೂಕಾಸ್ಪತ್ರೆ ಯಲ್ಲಾಪುರದಲ್ಲಿ 120, ಮಂಚಿಕೇರಿ ಪ್ರಾ.ಆರೋಗ್ಯ ಕೇಂದ್ರದಲ್ಲಿ 150 ಡೋಸ್ ಲಸಿಕೆ ನೀಡಲಾಗುತ್ತದೆ ಎಂದು ತಿಳಿಸಿದ್ದಾರೆ.
ಇಂದೆಷ್ಟು ಕೊರೊನಾ ಕೇಸ್; ಯಲ್ಲಾಪುರದಲ್ಲಿ ಮಂಗಳವಾರ 4 ಕೊರೊನಾ ಕೇಸ್ ಪತ್ತೆಯಾಗಿದ್ದು, ಇಬ್ಬರು ಗುಣಮುಖರಾಗಿದ್ದಾರೆ. ಇಂದು ವಜ್ರಳ್ಳಿ ವ್ಯಾಪ್ತಿಯಲ್ಲಿ 4 ಕೇಸ್ ದೃಢಪಟಟಿದೆ. ಈವರೆಗೆ 3970 ಮಂದಿಯಲ್ಲಿ ಕೊರೊನಾ ದೃಢಪಟ್ಟಿದ್ದು, 3914 ಮಂದಿ ಗುಣಮುಖರಾಗಿದದ್ದಾರೆ. ಸದ್ಯ 21 ಕೇಸ್ ಸಕ್ರಿಯವಾಗಿದೆ.