ಶಿರಸಿ: ಉತ್ತರ ಕನ್ನಡ ಜಿಲ್ಲೆ ಶಿರಸಿ ಬೆಂಗಳೆ ಮೂಲದ ಕೋಚ್ ಕಾಶೀನಾಥ್ ನಾಯ್ಕ ಅವರ ಪುಣೆಯಲ್ಲಿರುವ ಮನೆಗೆ ಇಂದು ಚಿನ್ನದ ಹುಡುಗ ನೀರಜ್ ಚೋಪ್ರಾ ಭೇಟಿ ನೀಡಿ ಟೊಕಿಯೊದಲ್ಲಿ ನಡೆದ ಒಲಂಪಿಕ್ಸ್ ಜಾವೆಲಿನ್ ಥ್ರೋನಲ್ಲಿ ಮಾಡಿದ ಸಾಧನೆಯ ಸಂತಸ ಹಂಚಿಕೊಂಡಿದ್ದಾರೆ.
ಭಾರತೀಯ ಸೇನೆಯಲ್ಲಿ ಸುಬೇದಾರ್ ಹುದ್ದೆಯಲ್ಲಿರುವ, ಪ್ರಸ್ತುತ ಪುಣೆಯ ಸೇನಾ ಕ್ರೀಡಾ ಇನ್‍ಸ್ಟಿಟ್ಯೂಟ್‍ನಲ್ಲಿ ತರಬೇತುದಾರ ಕಾಶೀನಾಥ್ ನಾಯ್ಕ ಅವರು ಚಿನ್ನದ ಕುವರ ನೀರಜ್ ಚೋಪ್ರಾ ಅವರ ಹಿಂದಿನ ಶಕ್ತಿಯಾಗಿದ್ದರು. 23 ವರ್ಷದಿಂದ ಸೇನೆಯಲ್ಲಿರುವ ಕಾಶಿನಾಥ ನಾಯ್ಕ 2010ರ ನವದೆಹಲಿಯ ಕಾಮನ್‍ವೆಲ್ತ್ ಗೇಮ್ಸ್‍ನ ಜಾವೆಲಿನ್ ಎಸೆತದಲ್ಲಿ ಕಂಚಿನ ಪದಕ ಗಳಿಸಿದ್ದರು. 2013ರಿಂದ 2019ರವರೆಗೆ ಅಂತರರಾಷ್ಟ್ರೀಯ ಮಟ್ಟದ ಸ್ಪರ್ಧೆಗಳಲ್ಲಿ ಭಾರತವನ್ನು ಪ್ರತಿನಿಧಿಸುವ ಕ್ರೀಡಾಪಟುಗಳಿಗೆ ತರಬೇತಿ ನೀಡಿದ್ದಾರೆ. ಈ ವೇಳೆ ನೀರಜ್ ಜೋಪ್ರಾಗೂ ತರಬೇತಿ ನೀಡಿದ್ದರು.
ತಾನು ತರಬೇತಿ ನೀಡಿದ್ದ ಹುಡುಗ ಚಿನ್ನ ಗೆದ್ದಿದ್ದಕ್ಕೆ ಸಂತಸ ಪಟ್ಟಿದ್ದರು.ಇನ್ನು ರಾಜ್ಯ ಸರ್ಕಾರ ಕೂಡ ಕಾಶಿನಾಥ್ ಗೆ 10 ಲಕ್ಷ ಬಹುಮಾನ ಸಹ ಘೋಷಿಸಿತ್ತು. ಆದರೇ ಅಥ್ಲೆಟಿಕ್ ಸಂಸ್ಥೆಯ ಅಧ್ಯಕ್ಷ ಅದಿಲ್ಲೆ ಸುಮರಿವಾಲ್ಲಾ ಕಾಶಿನಾಥ್ ತರಬೇತಿ ನೀಡಿಲ್ಲ. ಎಂದು ಹೇಳಿಕೆ ನೀಡಿ ವಿವಾದ ಸೃಷ್ಟಿಸಿದ್ದು, ಕಾಶಿನಾಥ ಗುರುವೇ ಅಲ್ಲ ಎಂಬ ಅನೇಕರ ಪ್ರಶ್ನೆಗೆ ನೀರಜ್ ಛೋಪ್ರಾ ಉತ್ತರ ನೀಡಿದ್ದಾರೆ.