ಯಲ್ಲಾಪುರ: ಮಾನವೀಯ ಸಂಬಂಧಗಳು ಶಿಥಿಲವಾಗುತ್ತಿರುವ ಸಂದರ್ಭದಲ್ಲಿ ಬಾಂಧವ್ಯ ಬಲಗೊಳಿಸುವ ಕೆಲಸ ಆಗಬೇಕಾಗಿದೆ. ಅದು ರಕ್ಷಾ ಬಂಧನದಿಂದ ಮಾತ್ರ ಸಾಧ್ಯ ಎಂದು ಬಿ.ಕೆ.ಶಿವಲೀಲಕ್ಕ ಹೇಳಿದರು.
ಅವರು ಮಂಗಳವಾರ ಪಟ್ಟಣದ ಶಾರದಾಗಲ್ಲಿಯಲ್ಲಿರುವ ಈಶ್ವರೀಯ ವಿಶ್ವವಿದ್ಯಾಲಯದ ಶಾಖೆಯಲ್ಲಿ ಪತ್ರಕರ್ತರೊಂದಿಗೆ ರಕ್ಷಾಬಂಧನ ಆಚರಿಸಿ ಮಾತನಾಡುತ್ತಿದ್ದರು. ರಾಕಿ ಪ್ಯಾಶನ್ ಗಾಗಿ ಅಥವಾ ಶೋಕಿಗಾಗಿ ಅಲ್ಲ. ಅದು ಸ್ನೇಹ, ಸಹೋದರತೆಯ ಬಾಂಧವ್ಯ ಬಲಗೊಳಿಸುವ ಮೂಲಕ ಬಾಳಿಗೆ ಶ್ರೀರಕ್ಷೆಯಾಗಬೇಕು ಎಂದರು.
ಬಿಕೆ ವಾಣಿಶ್ರೀ ಅಕ್ಕ, ಕಾರ್ಯನಿರತ ಪತ್ರಿಕಾ ವರದಿಗಾರ ಸಂಘದ ಅಧ್ಯಕ್ಷ ಕೆ.ಎಸ್.ಭಟ್ಟ ಆನಗೋಡ, ಕಾರ್ಯದರ್ಶಿ ಶ್ರೀಧರ ಅಣಲಗಾರ, ಪತ್ರಕರ್ತ ಸುಬ್ರಾಯ ಬಿದ್ರೆಮನೆ, ಕಲಾವಿದ ಗುರು ಜಂಬೆಸಾಲ್ ಇದ್ದರು.