ಶಿರಸಿ: ನಗರದ ಮಹಾಲಕ್ಷ್ಮೀ ಮೆಮೋರಿಯಲ್ ಹಾಸ್ಪಿಟಲ್ ಶಿರಸಿಯಲ್ಲಿ ಪ್ರಥಮ ಮತ್ತು ದ್ವಿತೀಯ ಡೋಸ್ ಕೊರೊನಾ ಲಸಿಕೆ ಪಡೆದುಕೊಳ್ಳುವವರಿಗೆ ಲಸಿಕೆ ಲಭ್ಯವಿದೆ ಎಂದು ಡಾ.ದಿನೇಶ ಹೆಗಡೆ ತಿಳಿಸಿದ್ದಾರೆ.
ಆಸ್ಪತ್ರೆಯಲ್ಲಿ ಕೋವಿಶೀಲ್ಡ್ ಮತ್ತು ಕೋವ್ಯಾಕ್ಸಿನ್ ಲಸಿಕೆಯಿದ್ದು, ಪ್ರತಿದಿನವೂ ಬೆಳಿಗ್ಗೆ 10 ರಿಂದ 12 ಗಂಟೆ, ಮಧ್ಯಾಹ್ನ 4 ರಿಂದ 6 ಗಂಟೆವರೆಗೆ ಲಸಿಕೆ ನೀಡಲಾಗುತ್ತದೆ. ಲಸಿಕೆ ಪಡೆಯ ಬಯಸುವವರು ಕೂಡಲೇ ಹೆಸರು ನೋಂದಣಿಗೆ ದೂ.ಸಂಖ್ಯೆ : 08384225341, 9243367888 ಕರೆ ಮಾಡಬಹುದಾಗಿದೆ. ಸರ್ಕಾರ ನಿಗದಿ ಮಾಡಿದ ದರದಂತೆ ಕೋವ್ಯಾಕ್ಸಿನ್ ಪಡೆದುಕೊಳ್ಳುವವರು 1200 ರೂ, ಕೋವಿಶೀಲ್ಡ್ ಲಸಿಕೆ ಪಡೆಯುವವರು 750 ರೂ ಭರಿಸಬೇಕಾಗುತ್ತದೆ ಎಂದು ಡಾ.ಸುಮನ್ ಹೆಗಡೆ ತಿಳಿಸಿದ್ದಾರೆ.