ಶಿರಸಿ: ಶಿರಸಿ ಶೈಕ್ಷಣಿಕ ಜಿಲ್ಲೆಯ ಶಾಲೆಗಳಿಗೆ ದೆಹಲಿಯ ರೂಟ್ಸ್ ಟೂ ರೂಟ್ಸ್ ವಿರ್ಸಾ ವತಿಯಿಂದ ಉಚಿತವಾಗಿ ಟಿವಿ ನೀಡಿದ್ದು, ಅದರ ಉದ್ಘಾಟನಾ ಸಮಾರಂಭ ಆ.25 ರಂದು ನಡೆಯಲಿದೆ.
ನಗರದ ಲಯನ್ಸ್ ಶಾಲೆಯಲ್ಲಿ ಆ.25 ಬುಧವಾರ ಬೆಳಿಗ್ಗೆ 11 ಗಂಟೆಗೆ ಉದ್ಘಾಟನಾ ಕಾರ್ಯಕ್ರಮ ನಡೆಯಲಿದ್ದು, ಸಂಸದ ಅನಂತಕುಮಾರ ಹೆಗಡೆ ಉದ್ಘಾಟನೆಗೊಳಿಸುವರು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.