ದಾಂಡೇಲಿ: ನಗರದ ವೆಸ್ಟ್ ಕೋಸ್ಟ್ ಕಾಗದ ಕಾರ್ಖಾನೆಯ ಕಾರ್ಮಿಕರಿಗೆ ಅನ್ಯಾಯವಾಗಲು ಬಿಡುವುದಿಲ್ಲ. ಅವರ ವೇತನ ಪರಿಷ್ಕರಣೆಯ ನ್ಯಾಯಯುತ ಮನವಿಯನ್ನು ಆಡಳಿತ ಮಂಡಳಿ ಪರಿಶೀಲನೆ ನಡೆಸಬೇಕೆಂದು ಎಂದು ಮಾಜಿ ಶಾಸಕ ಮತ್ತ ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸದಸ್ಯ ಸುನೀಲ ಹೆಗಡೆ ಹೇಳಿದರು.
ಸೋಮವಾರ ದಾಂಡೇಲಿಗೆ ಭೇಟಿ ನೀಡಿದ ಅವರು ಮಾತನಾಡಿ ವೆಸ್ಟ್ ಕೋಸ್ಟ್ ಕಾಗದ ಕಾರ್ಖಾನೆ ಆಡಳಿತ ಮಂಡಳಿಯವರು ಕಾರ್ಮಿಕರ ವೇತನ ಪರಿಷ್ಕರಣೆ ಮಾಡಬೇಕು. ಅವರ ವೇತನ ಪರಿಷ್ಕರಣೆ ಮುಖ್ಯ, ಏಕೆಂದರೆ ಕಾರ್ಖಾನೆ ಕೆಲಸದಲ್ಲಿ ಅವರು ಉತ್ತಮವಾಗಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಹೀಗಿರುವಾಗ ಅವರ ವೇತನ ಮತ್ತು ಇನ್ನಿತರ ಬೇಡಿಕೆ ಪರಿಶೀಲನೆ ನಡೆಸುವುದು ಆಡಳಿತ ಮಂಡಳಿ ಆದ್ಯ ಕರ್ತವ್ಯ. ಕೂಡಲೇ ವೇತನ ಒಪ್ಪಂದ ಪರಿಷ್ಕರಣೆಯನ್ನು ಮಾಡದಿದ್ದಲ್ಲಿ ಸರ್ಕಾರ ಮಧ್ಯ ಪ್ರವೇಶ ಮಾಡಬೇಕಾಗುತ್ತೆ. ನಾನು ಯಾವತ್ತೂ ಕಾರ್ಮಿಕರ ಪರ ಎಂದು ಹೇಳಿದರು.