ಶಿರಸಿ: ಅವಧೂತ ಪರಂಪರೆಯ ಕೊಂಡಿಯಾಗಿದ್ದ ದಿವಗಿ ಶ್ರೀರಾಮಾನಂದ ಸ್ವಾಮೀಜಿಗಳ ಅಗಲಿಕೆಗೆ ಅವರು ದೀಕ್ಷೆ ಪಡೆದ ಸ್ಥಳ ತಾಲೂಕಿನ ಕೊಳಗಿಬೀಸನಲ್ಲಿ ಭಾವಪೂರ್ಣವಾಗಿ ಶ್ರದ್ದಾಂಜಲಿ ಸಲ್ಲಿಸಲಾಯಿತು.
ಶ್ರೀ ಸಹಜಾನಂದ ಅವಧೂತರ ಆರಾಧನೆ ದಿನದಂದೇ ರಾಮಾನಂದರಿಗೂ ಅವರ ಭಾವ ಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ನುಡಿ ನಮನ ಸಲ್ಲಿಸಲಾಯಿತು. ನಡೆದಾಡುವ ಮಾರುತಿ ಎಂದೇ ಹೆಸರಾಗಿದ್ದ ರಾಮಾನಂದರ ಅಗಲಿಕೆಗೆ ಪಾಲ್ಗೊಂಡ ಆಸ್ತಿಕ ಭಕ್ತರು ಕಂಬನಿ ಮಿಡಿದರು.
ಈ ವೇಳೆ ಕರೂರು ಸೀಮಾ ಅಧ್ಯಕ್ಷ ಉಮಾಪತಿ ಭಟ್ಟ ಮತ್ತಿಗಾರ, ದೇವಸ್ಥಾನದ ಅಧ್ಯಕ್ಷ ಶ್ರೀಧರ ಹೆಗಡೆ ಇಳ್ಳುಮನೆ, ವಿ.ಆರ್.ಭಟ್ಟ ಟೊಣ್ಣೆಮನೆ, ಎಂ.ಆರ್.ಹೆಗಡೆಪಟ್ಟಿಗುಂಡಿ, ದೇವಸ್ಥಾನದ ಅರ್ಚಕ ಕುಮಾರ ಭಟ್ಟ ಇತರರು ಇದ್ದರು.