• Slide
    Slide
    Slide
    previous arrow
    next arrow
  • ಕುಮಟಾದಲ್ಲಿ ಕೊಂಕಣಿ ಮಾನ್ಯತಾ ದಿವಸ ಸಂಭ್ರಮಾಚರಣೆ

    300x250 AD

    ಕುಮಟಾ: ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ಮಂಗಳೂರು ಇವರು ಕೊಂಕಣಿ ಪರಿಷದ್ ಕುಮಟಾ ಇವರ ಸಹಯೋಗದೊಂದಿಗೆ ಕೊಂಕಣಿ ಭಾಷೆಗೆ ಸಂವಿಧಾನದ ಎಂಟನೆಯ ಪರಿಚ್ಛೇದದ ಅನ್ವಯ ರಾಷ್ಟ್ರ ಭಾಷಾ ಮಾನ್ಯತೆ ದೊರಕಿದ ದಿನವಾದ ಆ. 20 ರ ದಿನವನ್ನು ಪಟ್ಟಣದ ನಾದಶ್ರೀ ಕಲಾಕೇಂದ್ರದಲ್ಲಿ ರವಿವಾರ ಕೊಂಕಣಿ ಮಾನ್ಯತಾ ದಿವಸದ ಸಂಭ್ರಮಾಚರಣೆಯನ್ನಾಗಿ ಆಚರಿಸಿದರು.

    ಕಾರ್ಯಕ್ರಮದ ಉದ್ಘಾಟಕರು ಹಾಗೂ ವಿಚಾರಗೋಷ್ಠಿಯ ಉಪನ್ಯಾಸಕರಾದ ಕೊಂಕಣಿ ನಾಟಕಕಾರ ,ಕಲಾವಿದ ವಾಸುದೇವ ಬಿ ಶಾನಭಾಗ ಶಿರಸಿ ಅವರು ಕಾರ್ಯಕ್ರಮ ಉದ್ಘಾಟಿಸಿ ಮಾತಾನಾಡಿ ಕೊಂಕಣಿ ಭಾಷೆಯು ಅತ್ಯಂತ ಸುಮಧುರ ಭಾಷೆಯಾಗಿದ್ದು ಈ ಭಾಷೆಯಲ್ಲಿ ಸಾಹಿತ್ಯದ ಸೃಷ್ಟಿ ಇನ್ನೂ ಹೆಚ್ಚಿಗೆ ಆಗಬೇಕು. ಕೊಂಕಣಿ ಭಾಷೆಯನ್ನು ಹೆಚ್ಚಿನ ಶಾಲೆಗಳಲ್ಲಿ ಬೋಧಿಸುವಂತಾಗಬೇಕು. ಇಂದು ಕೊಂಕಣಿಯಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆಯಬಹುದು.ರಾಷ್ಟ್ರೀಯ ಸ್ಪರ್ಧಾತ್ಮಕ ಪರೀಕ್ಷೆ ತೆಗೆದುಕೊಳ್ಳಬಹುದು. ಒಂದು ಕಾಲದಲ್ಲಿ ಪೆÇೀರ್ಚುಗೀಸರ ದಬ್ಬಾಳಿಕೆಗೆ ನಲುಗಿದ ಈ ಭಾಷೆ ಇಲ್ಲಿಯ ತನಕವೂ ಊರ್ಜಿತದಲ್ಲಿದ್ದು, ರಾಷ್ಟ್ರಮಾನ್ಯತೆ ಪಡೆದಿದೆ. ಸಂಸತ್ತಿನಲ್ಲಿಯೂ ಈ ಭಾಷೆಯನ್ನು ಅಧಿಕಾರಯುತವಾಗಿ ಬಳಸಬಹುದಾಗಿದೆ ಎಂದರು.

    ಪ್ರಾಸ್ತಾವಿಕ ನುಡಿಗಳನ್ನಾಡಿದ ಕೊಂಕಣಿ ಪರಿಷದ್ ಉಪಾಧ್ಯಕ್ಷರಾದ ಮುರಳೀಧರ ಪ್ರಭು, ರಕ್ಷಾ ಬಂಧನದ ದಿನವಾದ ಇಂದು ಸರ್ವ ಕೊಂಕಣಿ ಭಾಷಿಕರೂ ಭಾಷೆಗೆ ರಕ್ಷೆ ಬಂಧಿಸುವ ಪ್ರಮಾಣ ಮಾಡೋಣ ಸರಕಾರ ಆನ್ ಲೈನ್ ಮೂಲಕ ಭಾಷೆಯ ಡಿಪೆÇ್ಲಮಾ ಕೊರ್ಸುಗಳನ್ನು ಆರಂಭಿಸಲು ಸಾಧ್ಯವಿದೆಯೋ ಎಂಬ ಬಗ್ಗೆ ಅಕಾಡೆಮಿಯಲ್ಲಿ ಚರ್ಚೆ ಆಗಬೇಕು.ಇದರಿಂದ ಮಹಿಳೆಯರು ಕೊಂಕಣಿ ಭಾಷೆಯನ್ನು ಮನೆಯಲ್ಲಿಯೇ ಇದ್ದು ಕಲಿಯಲು ಸಾಧ್ಯವಿದೆ ಎಂದರು.

    ಮುಖ್ಯ ಅತಿಥಿಯಾಗಿ ಆಗಮಿಸಿದ ಕೊಂಕಣಿ ಸಾಹಿತ್ಯ ಅಕಾಡೆಮಿಯ ಸದಸ್ಯ ಚಿದಾನಂದ ಭಂಡಾರಿ ಮಾತನಾಡಿ ಜಿಲ್ಲೆಯಲ್ಲಿ ಅಧಿಕ ಸಂಖ್ಯೆಯಲ್ಲಿ ಕೊಂಕಣಿ ಭಾಷಿಕರು ಇದ್ದು, ಬಹುತೇಕ ಕೊಂಕಣಿ ಪಂಗಡಗಳೂ ಜಿಲ್ಲೆಯಲ್ಲಿವೆ.ಆದರೆ ಸೂಕ್ತ ಪ್ರಾತಿನಿಧ್ಯ ದೊರೆಯುತ್ತಿಲ್ಲ.ಮೊದಲ ಬಾರಿ ಜಿಲ್ಲೆಯ ಉಭಯರಿಗೆ ಈ ವರ್ಷ ಅಕಾಡೆಮಿಯ ಗೌರವ ಪುರಸ್ಕಾರ ದೊರೆತಿರುವುದು ಸಂತಸದ ಸಂಗತಿಯಾಗಿದೆ.ಕುಮಟಾದಲ್ಲಿ ಕೊಂಕಣಿಭಾಷೆಯ ಕಾರ್ಯ ಚಟುವಟಿಕೆ ಚುರುಕಾಗಿಸುವ ನಿಟ್ಟಿನಲ್ಲಿ ಅಧ್ಯಯನ ಕೇಂದ್ರ ಸ್ಥಾಪಿಸುವಂತೆ ಆಗ್ರಹಿಸೋಣ ಎಂದರು.

    ಕಾರ್ಯಕ್ರಮದಲ್ಲಿ ಉದಯೋನ್ಮುಖ ಬರಹಗಾರ್ತಿ ವನಿತಾ ಶಿರೀಶ ನಾಯಕ ರವರ ಚೊಚ್ಚಲ ಕವನ ಸಂಕಲನ ಪಾರಿಜಾತ ವನ್ನು ಬಿಡುಗಡೆ ಮಾಡಲಾಯಿತು.ವೇದಿಕೆಯ ಮೇಲಿದ್ದ ಸರ್ವ ಗಣ್ಯರೂ ವನಿತಾ ನಾಯಕರ ಸಾಹಿತ್ಯ ಪ್ರೇಮವನ್ನು ಪ್ರಶಂಸಿಸಿ ಪಾರಿಜಾತದಂತೆ ಇನ್ನೂ ಹೆಚ್ವಿನ ಕೃತಿಗಳು ಹೊರಹೊಮ್ಮಲಿ ಎಂದು ಹಾರೈಸಿದರು.

    ಕವಯಿತ್ರಿ ವನಿತಾನಾಯಕರವರು ತಮ್ಮಸಾಹಿತ್ಯ ಕೃಷಿಗೆ ಸಹಕರಿಸಿದ ಸಕಲರನ್ನೂ ಸ್ಮರಿಸಿ ಭವಿಷ್ಯದಲ್ಲಿ ಹೆಚ್ಚಿನ ಭಾಷಾ ಸೇವೆ ಮಾಡುವುದಾಗಿ ಹೇಳಿದರು.

    300x250 AD

    ಮತ್ತೋರ್ವ ಅತಿಥಿ ಪ್ರಾಚಾರ್ಯೆ ಪ್ರೀತಿ ಭಂಡಾರಕರ್ ಅವರು ಮಾತನಾಡಿ ಮನೆಯಲ್ಲಿ ಬಳಸುವ ಪದಗಳು ಕೊಂಕಣಿಯಾದರೆ ಭಾಷೆ ಉಳಿಯುತ್ತದೆ.ಕೊಂಕಣಿ ನಾಟಕಗಳು ಹೆಚ್ಚಿನ ಸಂಖ್ಯೆಯಲ್ಲಿ ಪ್ರಯೋಗವಾದರೆ ಭಾಷಾ ಬಾಂಧವ್ಯ ಬೆಳೆಯುತ್ತದೆ ಎಂದರು.

    ಅಧ್ಯಕ್ಷತೆಯನ್ನು ವಹಿಸಿದ್ದ ಅರುಣ ಉಭಯಕರ್ ಅವರು ಕೋವಿಡ್ ನ ಸಂದರ್ಭದಲ್ಲಿ ಕಾರ್ಯಕ್ರಮವು ಅಚ್ಚುಕಟ್ಟಾಗಿ ಜರುಗಿದ ಬಗ್ಗೆ ಹರ್ಷ ವ್ಯಕ್ತಪಡಿಸಿ ಕಾರ್ಯಕ್ರಮಕ್ಕೆ ಸಹಕರಿಸಿದ ಎಲ್ಲರಿಗೂ ಧನ್ಯತೆಯನ್ನು ಸೂಚಿಸಿ ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಕೊಂಕಣಿ ಸಂಘಟನೆಯಲ್ಲಿ ಪಾತ್ರವಹಿಸಬೇಕೆಂದು ಆಶಿಸಿದರು.

    ಅತಿಥಿಗಳಾದ ಪುರಸಭಾ ಸದಸ್ಯ ಟೋನಿ ರೊಡ್ರಗೀಸ್ ಹಾಗೂ ಪರಿಷದ್ ಉಪಾಧ್ಯಕ್ಷ ಎಂ ಬಿ ಪೈ ಮಾತನಾಡಿ ಕಾರ್ಯಕ್ರಮಕ್ಕೆ ಶುಭಕೋರಿದರು.

    ಈ ಕಾರ್ಯಕ್ರಮದಲ್ಲಿ ಖ್ಯಾತ ಸಿಂಹ ನೃತ್ಯ ಕಲಾವಿದರಾದ ಹಾಸ್ಯಗಾರ ಮೋಹನ ಧಾರೇಶ್ವರ ಅವರನ್ನು ಹಾಗೂ ಎಸ್ ಎಸ್ ಎಲ್ ಸಿ ಮತ್ತು ಪಿಯುಸಿ ಯಲ್ಲಿ ಅಮೋಘ ಸಾಧನೆ ಮಾಡಿದ ಕೊಂಕಣಿ ಭಾಷಿಕ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.

    ಮಾನ್ಯತಾ ದಿವಸದ ಅಂಗವಾಗಿ ಜರುಗಿದ ವಿವಿಧ ಸ್ತರದ ಸ್ಪರ್ಧಾವಿಜೇತರಿಗೆ ಬಹುಮಾನವನ್ನು ವಿತರಿಸಲಾಯಿತು.

    ಪರಿಷದ್ ನ ಸದಸ್ಯರಾದ ಪೆÇ್ರೀ,ಆನಂದ ನಾಯಕ ಇವರು ಅತಿಥಿಗಳ ಪರಿಚಯ ಹಾಗೂ ಸ್ವಾಗತ ಗೈದರು.ಅರುಣ ಮಣಕೀಕರ್ ಹಾಗೂ ಕಾರ್ಯದರ್ಶಿ ನಿರ್ಮಲಾ ಪ್ರಭು ಕಾರ್ಯಕ್ರಮ ನಿರ್ವಹಿಸಿದರು. ಪರಿಷದ್ ನ ಖಜಾಂಚಿ ಮಾಧವ ಶಾನಭಾಗ ವಂದನಾರ್ಪಣೆ ಮಾಡಿದರು. ವೈಶಾಲಿ ನಾಯಕ ಹಾಗೂ ಶೃದ್ದಾ ನಾಯಕ ಪ್ರಾರ್ಥಿಸಿದರು.

    Share This
    300x250 AD
    300x250 AD
    300x250 AD
    Leaderboard Ad
    Back to top