• first
    second
    third
    previous arrow
    next arrow
  • ಅಕ್ರಮ ಚಿಪ್ಪಿ ಗಣಿಗಾರಿಕೆಯಿಂದ ಮೀನುಗಾರರಿಗೆ ಸಂಕಷ್ಟ; ಶಾಸಕ ದಿನಕರ ಶೆಟ್ಟಿಗೆ ಮನವಿ

    300x250 AD


    ಕುಮಟಾ: ಅಘನಾಶಿನಿ ನದಿಯ ಸುತ್ತಮುತ್ತಲಲ್ಲಿ ಅಕ್ರಮ ಚಿಪ್ಪಿ ಗಣಿಗಾರಿಕೆ ನಡೆಯುವುದನ್ನು ತಡೆಯಬೇಕು. ಇದರಿಂದ ಮೀನುಗಾರಿಕೆಗೆ ಆಗುವ ಸಮಸ್ಯೆಗಳನ್ನು ತಪ್ಪಿಸಬೇಕೆಂದು ತಾಲೂಕಾ ಮೀನುಗಾರ ಮುಖಂಡರು ಸೋಮವಾರ ಶಾಸಕ ದಿನಕರ ಶೆಟ್ಟಿಯವರನ್ನು ಭೇಟಿ ಮಾಡಿ ಮನವಿ ಮಾಡಿಕೊಂಡರು.

    ತದಡಿ ಮೀನುಗಾರರ ಸಹಕಾರಿ ಸಂಘದ ನಿರ್ದೇಶಕರಾದ ನಾರಾಯಣ ಮೂಡಂಗಿ ಮಾತನಾಡಿ ಅಘನಾಶಿನಿ ನದಿಯ ಸುತ್ತ ಮುತ್ತಲಿನ 40 ಹಳ್ಳಿಗಳ ಸುಮಾರು 50 ಸಾವಿರ ಬಡ ಮೀನುಗಾರರು ಈ ನದಿಯ ಮೀನುಗಾರಿಕೆಯನ್ನು ಅವಲಂಭಿಸಿ ತಮ್ಮ ಜೀವನ ಸಾಗಿಸುತ್ತಿದ್ದಾರೆ.ಈ ಭಾಗದಲ್ಲಿ ಚಿಪ್ಪಿ ಗಣಿಗಾರಿಕೆ ಮಾಡುವುದರಿಂದ ಜಲಚರಗಳಾದ ಬಳಚು ಮೀನು, ಸಿಗಡಿ, ಕಲಗಾ, ಏಡಿ, ದಿಣಸಿ ಹಾಗೂ ಇತರೆ ಮೀನುಗಳ ಸಂತಾನೋತ್ಪತ್ತಿ ಪ್ರದೇಶಗಳು ನಾಶವಾಗುವುದಲ್ಲದೇ ಅಘನಾಶಿನಿ ನದಿ ತೀರದ ಜೀವ ವೈವಿದ್ಯಮ ನಾಶವಾಗುತ್ತದೆ. ಸಾವಿರಾರು ಪಕ್ಷಿ ಸಂಕುಲಗಳು ಆಹಾರಕ್ಕೆ ಸಮಸ್ಯೆಯಾಗಲಿದೆ.ಜೊತೆಗೆ ಕಾಂಡ್ಲ ಮರಗಳು ಕಿತ್ತು ಬೀಳಲಿದೆ.ಚಿಪ್ಪು ತೆಗೆಯುವ ಉದ್ಯೋಗದಲ್ಲಿ ಸುಮಾರು 90% ಮೀನುಗಾರರು ನಿರತರಾಗಿದ್ದು, ದಿನಕ್ಕೆ 300 ರಿಂದ 400 ರೂಪಾಯಿಗಳನ್ನು ಸಂಪಾದಿಸುತ್ತಾರೆ.ಜೊತೆಗೆ ಗೋರು ಬಲೆ, ಬೀಸು ಬಲೆ, ಸರಗಾಳ, ಚಾಚು ಬಲೆ, ಕಂಟ್ಲೆ ಬಲೆ ಬಳಸಿ ಮೀನುಗಾರಿಕೆ ಮಾಡಿ ಜೀವನ ನಡೆಸುತ್ತಾರೆ.ಇಂತಹ ಜಾಗದಲ್ಲಿ ಚಿಪ್ಪಿ ತೆಗೆಯುವುದರಿಂದ ಮೀನುಗಳ ಬೆಳೆಯುವ ಸ್ಥಳ ಸಂಪೂರ್ಣವಾಗಿ ಹಾಳಾಗಿ, ಸಾಂಪ್ರದಾಯಿಕ ಮೀನುಗಾರಿಕೆಗೆ ತೊಂದರೆಯಾಗುತ್ತದೆ.ಚಿಪ್ಪಿ ಗಣಿಗಾರಿಕೆಯಿಂದ ನದಿಯಲ್ಲಿ ದೊಡ್ಡ ದೊಡ್ಡ ಆಳಗಳಾಗಿ ಮೀನುಗಾರಿಕೆಗೆ ತೆರಳಿದ ಅನೇಕರು ಮೃತಪಟ್ಟ ಘಟನೆ ನಡೆದಿದೆ.ಹೀಗಾಗಿ ಚಿಪ್ಪಿ ತೆಗೆಯಲು ಕೊಟ್ಟ ಪರವಾನಿಗೆಯನ್ನು ರದ್ದುಪಡಿಸಿ ಸಂಪೂರ್ಣ ಚಿಪ್ಪಿ ಗಣಿಗಾರಿಕೆಯನ್ನು ನಿಲ್ಲಿಸಬೇಕೆಂದು ಆಗ್ರಹಿಸಿದರು.

    ನಂತರ ಮಾತನಾಡಿದ ಮಿರ್ಜಾನ್ ಗ್ರಾ.ಪಂ ಸದಸ್ಯ ಮಂಜುನಾಥ ಹರಿಕಾಂತ್ರ, ನಿನ್ನೆ ದಿನ ಕಿಮಾನಿ ಭಾಗದಲ್ಲಿ ತಾಲೂಕಾ ಮೀನುಗಾರರು ಸಭೆ ನಡೆಸಿ ಚಿಪ್ಪಿ ಗಣಿಗಾರಿಕೆಯನ್ನು ಸಂಪೂರ್ಣವಾಗಿ ನಿಲ್ಲಿಸಲು ಒಕ್ಕೊರಲ ಒಮ್ಮತ ವ್ಯಕ್ತಪಡಿಸಿ ಇಂದು ಶಾಸಕರನನ್ನು ಭೇಟಿ ಮಾಡಿದ್ದು ಶಾಸಕರು ಮೀನುಗಾರರಿಗೆ ಸ್ಪಂದಿಸಿ ತಹಶಿಲ್ದಾರ,ಸಹಾಯಕ ಆಯುಕ್ತರ ಮೂಲಕ ಚಿಪ್ಪಿ ತೆಗೆಯುವುದನ್ನು ತಡೆಯಬೇಕು ಎಂದರು.

    300x250 AD

    ಈ ಸಂದರ್ಭದಲ್ಲಿ ಮೀನುಗಾರ ಸಮಾಜದ ಪ್ರಮುಖರಾದ ಉಮಾಕಾಂತ ಹೊಸ್ಕಟ್ಟಾ, ಮೋಹನ ಲಕ್ಕುಮನೆ,ಶಿವರಾಮ ಹರಿಕಂತ್ರ, ಮೋಹನ ಮೂಡಂಗಿ,ಗಣೇಶ ಅಂಬಿಗ,ಲಕ್ಷ್ಮಣ ಅಂಬಿಗ, ಜಗದೀಶ ಹರಿಕಂತ್ರ, ಮೀನುಗಾರರಾದ ಬೀರಪ್ಪ ಹರಿಕಂತ್ರ,ಪ್ರವೀಣ ಅಂಬಿಗ, ಮಹಾಬಲೇಶ್ವರ ಅಂಬಿಗ ಸೇರಿದಂತೆ ಮೀನುಗಾರ ಮಹಿಳೆಯರು ಇದ್ದರು.

    Share This
    300x250 AD
    300x250 AD
    300x250 AD
    Leaderboard Ad
    Back to top