• first
    second
    third
    previous arrow
    next arrow
  • ಶ್ರೀಲಕ್ಷ್ಮೀನರಸಿಂಹನಿಗೆ ಲಕ್ಷಾಧಿಕ ತುಳಸಿ ದಳದ ಅರ್ಚನೆ

    300x250 AD

    ಕುಮಟಾ: ತಾಲೂಕಿನ ಹೊಲನಗದ್ದೆಯ ತೆಪ್ಪದಮಠದ ಗ್ರಾಮ ದೇವರಾದ ಶ್ರೀಲಕ್ಷ್ಮೀನರಸಿಂಹ ದೇವರಿಗೆ ಲಕ್ಷಾಧಿಕ ತುಳಸಿ ದಳದಿಂದ ಅರ್ಚನೆ ಮಾಡಿ ಶ್ರಾವಣ ಮಾಸದ ನೂಲು ಹುಣ್ಣಿಮೆಯ ಸೇವೆ ಸಲ್ಲಿಸಲಾಯಿತು.

    ಹಲವಾರು ವರ್ಷದಿಂದ ನೂಲು ಹಣ್ಣಿಮೆ ದಿನದಂದು ದೇವಾಲಯದಲ್ಲಿ ಶ್ರೀದೇವರಿಗೆ ಲಕ್ಷಾಧಿಕ ತುಳಸಿ ದಳವನ್ನು ಅರ್ಚಿಸಿ ಪೂಜೆ ನೆರವೇರಿಸಲಾಗುತ್ತಿದ್ದು, ಈ ವರ್ಷವೂ ಕೂಡ ಪೂಜೆ ಸಲ್ಲಿಸಲಾಯಿತು.

    300x250 AD

    ಭಾನುವಾರ ಮುಂಜಾನೆಯಿಂದ ಶ್ರೀ ಲಕ್ಷ್ಮೀ ನರಸಿಂಹ ಸ್ತೋತ್ರ ಪಠಣದೊಂದಿಗೆ ಪೂಜೆ ಆರಂಭವಾಗಿ, ಶ್ರೀಲಕ್ಷ್ಮೀನರಸಿಂಹ ಆರಾಧನೆ ಪೂಜೆ, ಶ್ರೀಲಕ್ಷ್ಮೀ ನರಸಿಂಹ ಪಾರಾಯಣ, ತುಳಸಿ ಅರ್ಪಣೆ, ಮಂತ್ರಘೋಷ, ಮಂತ್ರಪುಷ್ಪ ಪೂಜಾ ಸೇವೆಯೊಂದಿಗೆ ಪೂಜೆ ಸಲ್ಲಿಸಿ,ನಾಡು ಸುಭಿಕ್ಷೆಯಿಂದ ಕೂಡಿರಲಿ ಹಾಗೂ ಲೋಕದ ಜನರು ಸುಖ ಶಾಂತಿ ನೆಮ್ಮದಿಯಿಂದ ಬದುಕು ನಡೆಸುವಂತಗಾಲಿ ಎಂದು ಪ್ರಾರ್ಥಿಸಲಾಯಿತು.

    ವೇ.ನರಸಿಂಹ ಶಂಭು ಭಟ್ಟ ಅವರ ಅಧ್ವರ್ಯದಲ್ಲಿ ತುಳಸಿ ಅರ್ಚನೆ ಕಾರ್ಯ ನೆರವೆರಿತು. ದೇವಾಲಯದ ಅರ್ಚಕರಾದ ಲಕ್ಷ್ಮೀಶ ಭಟ್ಟ, ರವಿ ಭಟ್ಟ ಹಾಗೂ ಮಂಜುನಾಥ ಹೆಗಡೆ, ಜಿ.ಎನ್.ಭಟ್ಟ, ಶ್ರೀಧರ ಭಟ್ಟ ಕಡ್ಲೆ, ರಮೇಶ ಭಟ್ಟ ದೇವನಿಮಠ ಶ್ರೀಲಕ್ಷ್ಮೀನರಸಿಂಹ ಸ್ತ್ರೋತ್ರ ಪಠಿಸಿದರು.

    Share This
    300x250 AD
    300x250 AD
    300x250 AD
    Leaderboard Ad
    Back to top