ಜ್ಞಾನವಿದ್ಯಾವಿಹೀನಸ್ಯ ವಿದ್ಯಾಜಾಲಂ ನಿರರ್ಥಕಮ್
ಕಂಠಸೂತ್ರಂ ವಿನಾ ನಾರೀ ಹ್ಯನೇಕಾಭರಣೈರ್ಯುತಾ |
ವಿದ್ಯೆ ಬಹುಪ್ರಕಾರವಾದ್ದು. ಲೋಕದಲ್ಲಿ ಗೌರವಯುತವಾದ ಜೀವನವನ್ನು ನಡೆಸಿಕೊಂಡು ಹೋಗಲು ಬೇಕಾಗುವ ಕೌಶಲವೆಲ್ಲವೂ ವಿದ್ಯೆಯೇ. ಮರ ಏರುವುದು, ನೆಲ ಊಳುವುದು, ದನ ಕಾಯುವುದು, ಕಸೂತಿ ಮಾಡುವುದು, ಲೋಹ ವಿದ್ಯೆ, ಶಿಲ್ಪವಿದ್ಯೆ – ಹೀಗೆ ವಿದ್ಯೆಗಳಲ್ಲಿ ಅರವತ್ನಾಲ್ಕು ರೀತಿ ಇದೆಯಂತೆ ಇವೆಲ್ಲಕ್ಕೂ ಮಿಗಿಲಾದ್ದು, ಲೋಕದ ಬದುಕಿಗಿಂತ ಭಿನ್ನವಾದ ಫಲವನ್ನು ಕೊಡುವಂಥದು ಆತ್ಮವಿದ್ಯೆ. ಅದು ಅತ್ಯುನ್ನತವಾದ, ಸತ್ಯವಾದ ಮತ್ತು ಆಪ್ಯವಾದ ವಿದ್ಯೆಯಾಗಿದೆ. ಆ ಕುರಿತಾಗಿ ಎಚ್ಚರವೇ ಇಲ್ಲದೆ ಮತ್ತದೆಷ್ಟು ವಿದ್ಯೆಗಳನ್ನು ತಿಳಿದುಕೊಂಡಿದ್ದರೇನು ಉಪಯೋಗ? ಅದೆಷ್ಟೇ ಬಂಗಾರದ ಆಭರಣಗಳನ್ನು ಹೇರಿಕೊಂಡಿದ್ದರೂ ಕಂಠಸೂತ್ರವನ್ನೇ ಧರಿಸದ ವಿವಾಹಿತ ಹೆಣ್ಣು ಹೇಗೋ ಹಾಗೆ ಆತ್ಮವಿದ್ಯೆಯ ಕುರಿತು ಆಸ್ಥೆಯಿಲ್ಲದೆ ಬೇರೆ ನೂರಾರು ವಿದ್ಯೆಗಳನ್ನು ತಿಳಿದೂ ಪ್ರಯೋಜನವಿಲ್ಲ.
ಶ್ರೀ ನವೀನ ಗಂಗೋತ್ರಿ
ಸುವಿಚಾರ
