ಯಲ್ಲಾಪುರ: ತಾಲೂಕಿನಲ್ಲಿ ಆ.24 ಮಂಗಳವಾರ 1500 ಡೋಸ್ ಕೊರೊನಾ ಲಸಿಕೆ ಲಭ್ಯವಿದ್ದು, 1ನೇ ಮತ್ತು 2ನೇ ಡೋಸ್ ಪಡೆದುಕೊಳ್ಳುವ ಪ್ರತಿಯೊಬ್ಬರಿಗೂ ನೀಡಲಾಗುತ್ತದೆ ಎಂದು ಆರೋಗ್ಯಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಲಭ್ಯವಿರುವ 1500 ಡೋಸ್ ಲಸಿಕೆಯನ್ನು ತಾಲೂಕಾಸ್ಪತ್ರೆ ಯಲ್ಲಾಪುರದಲ್ಲಿ 100, ಚವತ್ತಿ ಪ್ರಾ.ಆರೋಗ್ಯ ಕೇಂದ್ರದಲ್ಲಿ 100, ಮಂಚಿಕೇರಿ ಪ್ರಾ.ಆರೋಗ್ಯ ಕೇಂದ್ರದಲ್ಲಿ 200, ಕುಂದರಗಿ ಪ್ರಾ.ಆರೋಗ್ಯ ಕೇಂದ್ರದಲ್ಲಿ 100, ಕಿರವತ್ತಿ ಪ್ರಾ.ಆರೋಗ್ಯ ಕೇಂದ್ರದಲ್ಲಿ 300, ದೇಹಳ್ಳಿ ಪ್ರಾ.ಆರೋಗ್ಯ ಕೇಂದ್ರದಲ್ಲಿ 200, ಮಲವಳ್ಳಿ ಪ್ರಾ.ಆರೋಗ್ಯ ಕೇಂದ್ರದಲ್ಲಿ 150, ಕಳಚೆ ಪ್ರಾ.ಆರೋಗ್ಯ ಕೇಂದ್ರದಲ್ಲಿ 50, ವಜ್ರಳ್ಳಿ ಪ್ರಾ.ಆರೋಗ್ಯ ಕೇಂದ್ರದಲ್ಲಿ 100, ನಂದೊಳ್ಳಿ ಪ್ರಾ.ಆರೋಗ್ಯ ಕೇಂದ್ರದಲ್ಲಿ 200 ಡೋಸ್ ಲಸಿಕೆ ಲಭ್ಯವಿದೆ.
ಇಂದೆಷ್ಟು ಕೊರೊನಾ ಕೇಸ್; ಯಲ್ಲಾಪುರದಲ್ಲಿ ಸೋಮವಾರ 4 ಕೊರೊನಾ ಕೇಸ್ ಪತ್ತೆಯಾಗಿದ್ದು, ಐವರು ಗುಣಮುಖರಾಗಿದ್ದಾರೆ. ಇಂದು ವಜ್ರಳ್ಳಿ ವ್ಯಾಪ್ತಿಯಲ್ಲಿ 3, ಪಟ್ಟಣದಲ್ಲಿ 1ಕೇಸ್ ದೃಢಪಟಟಿದೆ. ಈವರೆಗೆ 3966 ಮಂದಿಯಲ್ಲಿ ಕೊರೊನಾ ದೃಢಪಟ್ಟಿದ್ದು, 3912 ಮಂದಿ ಗುಣಮುಖರಾಗಿದದ್ದಾರೆ. ಸದ್ಯ 19 ಕೇಸ್ ಸಕ್ರಿಯವಾಗಿದೆ.