• Slide
    Slide
    Slide
    previous arrow
    next arrow
  • ಗೋವಾದಲ್ಲಿ ಆ.30 ರವರೆಗೆ ಕರ್ಫ್ಯೂ ಅವಧಿ ವಿಸ್ತರಣೆ

    300x250 AD


    ಗೋವಾ: ಆ.30 ರವೆರೆಗೆ ಗೋವಾದಲ್ಲಿ ಕರ್ಫ್ಯೂ ಅವಧಿ ವಿಸ್ತರಣೆ ಮಾಡಲಾಗಿದೆ. ಈ ಹಿನ್ನಲೆಯಲ್ಲಿ ಕರ್ನಾಟಕದ ಗಡಿ ಭಾಗದ ಕಾರವಾರದ ಮಾಜಾಳಿ-ಗೋವಾ ಭಾಗದಲ್ಲೂ ಪ್ರವಾಸಿಗರಿಗೆ ನಿರ್ಬಂಧಿತ ಪ್ರಯಾಣಕ್ಕೆ ಅವಕಾಶ ಮಾಡಿಕೊಡಲಾಗಿದ್ದು ಹೆಚ್ಚಿನ ತಪಾಸಣೆ ನಡೆಸಲಾಗುತ್ತಿದೆ.

    ಗೋವಾದ ಚಿತ್ರಮಂದಿರಗಳಲ್ಲಿ ಶೇ 50 ರಷ್ಟು ಪ್ರೇಕ್ಷಕರಿಗೆ ಅವಕಾಶ ನೀಡುವ ಮೂಲಕ ಚಿತ್ರಮಂದಿರ ತೆರೆಯಲು ಅನುಮತಿ ನೀಡಲಾಗಿದೆ. ಗೋವಾ ರಾಜ್ಯದಲ್ಲಿ ಕೋವಿಡ್ ಹರಡುವುದನ್ನು ತಡೆಯಲು ಮಾರ್ಚ್ ತಿಂಗಳಿಂದ ಜಾರಿಗೊಂಡಿದ್ದ ಕರ್ಫ್ಯೂ ವನ್ನು ಹಂತ ಹಂತವಾಗಿ ಅವಧಿ ವಿಸ್ತರಣೆ ಮಾಡಲಾಗುತ್ತಿದೆ. ರಾಜ್ಯದಲ್ಲಿ ಜಾರಿಯಲ್ಲಿದ್ದ ಕರ್ಫ್ಯೂ ಇಂದು ಮುಕ್ತಾಯಗೊಂಡ ಹಿನ್ನೆಲೆಯಲ್ಲಿ ಇನ್ನೂ ಒಂದು ವಾರಗಳ ಕಾಲ ಕರ್ಫ್ಯೂ ವಿಸ್ತರಣೆ ಮಾಡಿ ಸರ್ಕಾರ ಆದೇಶ ಹೊರಡಿಸಿದೆ.

    ಕೇರಳದಿಂದ ಆಗಮಿಸುವ ಪ್ರವಾಸಿಗರಿಗೆ ಗೋವಾ ರಾಜ್ಯ ಪ್ರವೇಶಿಸಲು ಆರ್‌ಟಿಪಿಸಿಆರ್ ನೆಗೆಟಿವ್ ವರದಿ ಖಡ್ಡಾಯಗೊಳಿಸಲಾಗಿದ್ದು, ಇತರ ರಾಜ್ಯಗಳಿಂದ ಗೋವಾಕ್ಕೆ ಆಗಮಿಸುವ ಪ್ರವಾಸಿಗರಿಗೆ ಕೋವಿಡ್ ಎಂಟಿಜನ್ ನೆಗೆಟಿವ್ ವರದಿ ಹೊಂದಿರುವುದು ಖಡ್ಡಾಯವಾಗಿದೆ.

    300x250 AD

    ಇನ್ನು ಕಾರವಾರದಿಂದ ಗೋವಾಕ್ಕೆ ಪ್ರತಿದಿನ ತೆರಳುವ ವಾಹನ ಹಾಗೂ ಉದ್ಯೋಗಿಗಳಿಗೂ ಈ ನಿಯಮ ಜಾರಿ ಮಾಡಲಾಗಿದ್ದು ಇದೀಗ ಪ್ರತಿ ದಿನ ತೆರಳುವ ಜನರಿಗು ಸಹ ತೊಂದರೆಯಾಗುತ್ತಿದೆ

    Share This
    300x250 AD
    300x250 AD
    300x250 AD
    Leaderboard Ad
    Back to top