ಶ್ರೀನಗರ: ಪ್ರವಾಸಿಗರನ್ನು ಸೆಳೆಯಲು ವಿಶಿಷ್ಟ ಪ್ರಯತ್ನಕ್ಕೆ ಕೈ ಹಾಕಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ) ಶ್ರೀನಗರದ ದಾಲ್ ಸರೋವರದಲ್ಲಿ ‘ತೇಲುವ ATM ಯಂತ್ರವನ್ನು ಸ್ಥಾಪಿಸಿದೆ.
ಈ ಎಟಿಎಂಅನ್ನು ಎಸ್‌ಬಿಐ ಮುಖ್ಯಸ್ಥ ದಿನೇಶ್ ಖರಾ ಅವರು ಆ.16ರಂದು ಉದ್ಘಾಟಿಸಿದ್ದು, ಇದು ಶ್ರೀನಗರದ ಮೋಡಿಯನ್ನು ಇನ್ನೂ ಹೆಚ್ಚಿಸಲಿದೆ ಎಂದು ಎಸ್‌ಬಿಐ ತಿಳಿಸಿದೆ. ದಾಲ್ ಸರೋವರದಲ್ಲಿ ಈಗಾಗಲೇ ತೇಲುವ ತರಕಾರಿ ಮಾರುಕಟ್ಟೆ, ತೇಲುವ ಅಂಚೆ ಕಚೇರಿ ಕೂಡ ಇದೆ.