ಹೊನ್ನಾವರ: ತಾಲೂಕಿನ ಗುಣವಂತೆಯಲ್ಲಿ ಸೋಮವಾರ ಬೆಳಗಿನ ಜಾವ ಅಕ್ರಮ ಗೋ ಸಾಗಾಟಕ್ಕೆ ಪ್ರಯತ್ನ ನಡೆಸಿದ ಘಟನೆ ಬೆಳಕಿಗೆ ಬಂದಿದ್ದು, ಪೊಲೀಸರು ಈ ಕುರಿತು ಕಾರ್ಯಾಚರಣೆ ಕೈಗೊಳ್ಳಬೇಕಿದೆ.
ಸೋಮವಾರ ಬೆಳಗಿನ ಜಾವ ಐಶಾರಾಮಿ ಕಾರಿನಲ್ಲಿ ಬಂದ ಗೋಕಳ್ಳರು ರಸ್ತೆಯಲ್ಲಿ ಮಲಗಿದ್ದ ಗೋವುಗಳನ್ನು ಕಾರಿನಲ್ಲಿ ತುಂಬಲು ಪ್ರಯತ್ನಿಸಿದ್ದಾರೆ. ದನಗಳ ಕುತ್ತಿಗೆಗೆ ಹಗ್ಗ ಹಾಕಿ ಗೋವನ್ನು ಎಳೆತಂದು ಕಾರಿನೊಳಕ್ಕೆ ತುಂಬುತ್ತಿರುವ ದೃಶ್ಯ ಸನಿಹದ ಸಿಸಿ ಟಿವಿಯಲ್ಲಿ ಸೆರೆಯಾಗಿದೆ.
ಮತ್ತೆ-ಮತ್ತೆ ಮರುಕಳಿಸುತ್ತಿರುವ ಘಟನೆ: ಗೋ ಕಳ್ಳತನಕ್ಕೆ ಪ್ರಯತ್ನ ನಡೆಸುತ್ತಿರುವ ಘಟನೆ ಜಿಲ್ಲೆಯಲ್ಲಿ ಆಗಾಗ ಮರುಕಳಿಸುತ್ತಿದ್ದು, ಇದರ ಹಿಂದೆ ಅಕ್ರಮ ಗೋ ಮಾಂಸ ಸಾಗಾಟ ಮತ್ತು ಗೋ ಸಾಗಾಟ ಜಾಲಗಳ ದೊಡ್ಡ ಕೈವಾಡವಿದೆಯೋ ? ಇದರಲ್ಲಿ ತೊಡಗಿಕೊಂಡವರ ಮೇಲೆ ಸೂಕ್ತ ಕ್ರಮಕ್ಕೆ ಪೊಲೀಸ್ ಇಲಾಖೆ ಶೀಘ್ರ ಕಾರ್ಯಗತವಾಗಬೇಕು. ಎಲ್ಲ ಪ್ರಕರಣಗಳ ಹಿಂದಿರುವವರ ಸೆರೆ ಹಿಡಿದು ಸೂಕ್ತ ಕಾನೂನು ಕ್ರಮ ಜರುಗಿಸಬೇಕೆಂದು ಸಾರ್ವಜನಿಕರ ಆಗ್ರಹವಾಗಿದೆ.
ಜೊತೆಗೆ ಈ ಕೃತ್ಯದ ಹಿಂದೆ ಅಡಗಿದ ವರನ್ನು ಬಂಧಿಸಲು ಪೆÇಲೀಸರು ಕಾರ್ಯಾಚರಣೆ ನಡೆಸಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಪೂರ್ಣ ಮಾಹಿತಿ ಪೋಲೀಸ್ ತನಿಖೆಯ ನಂತರದಲ್ಲಿ ತಿಳಿದು ಬರಬೇಕಿದೆ.