ಶಿರಸಿ: ಹಯಗ್ರೀವ ಜಯಂತಿ ಪ್ರಯುಕ್ತ ಭಾನುವಾರ ತಾಲೂಕಿನ ವಾದಿರಾಜ ಮಠದಲ್ಲಿ ಶ್ರೀಹಯಗ್ರೀವ ದೇವರಿಗೆ ವಿಷ್ಣುಸಹಸ್ರ ನಾಮಾರ್ಚನೆ ಪುರಸ್ಸರವಾಗಿ ವಿಶೇಷ ಪೂಜೆ ನೆರವೇರಿಸಲಾಯಿತು.
ಭಾವಿಸಮೀರ ಶ್ರೀವಾದಿರಾಜರ ಋಜುಭಕುತಿಗೆ ಒಲಿದು ಬಂದ ಶ್ರೀಹಯಗ್ರೀವ ದೇವರಿಗೆ ಸೋದೆ ಶ್ರೀವಿಶ್ವವಲ್ಲಭ ತೀರ್ಥ ಶ್ರೀಪಾದರು, ಭೀಮನಕಟ್ಟೆ ಮಠದ ಶ್ರೀರಘುವರೇಂದ್ರ ತೀರ್ಥ ಶ್ರೀಪಾದರು ಹಾಗೂ ಶೀರೂರು ಮಠದ ಶ್ರೀವೇದವರ್ಧನ ತೀರ್ಥ ಶ್ರೀಪಾದರು ಪೂಜಾ ಕೈಂಕರ್ಯವನ್ನು ನೆರವೇರಿಸಿದರು.
ಈ ಸಂದರ್ಭದಲ್ಲಿ ಗುರುರಾಜರ ಪಂಚವೃಂದವಾನ ಸನ್ನಿಧಿಯಲ್ಲಿ ಹಾಗೂ ಭೂತರಾಜರ ಸನ್ನಿಧಿಯಲ್ಲೂ ವಿಶೇಷ ಆರಾಧನೆ ನಡೆಯಿತು.