• Slide
    Slide
    Slide
    previous arrow
    next arrow
  • ಆಭರಣಗಳ ಮೇಲೆ HUID ಅಳವಡಿಕೆ ನಿಯಮ ಬೇಡ; ತಹಶೀಲ್ದಾರರಿಗೆ ಮನವಿ

    300x250 AD

    ಯಲ್ಲಾಪುರ: ಆಭರಣಗಳ ಮೇಲೆ ಹಾಲ್ ಮಾರ್ಕ್ ಅಡಿಯಲ್ಲಿ ಎಚ್.ಯು.ಐ.ಡಿ ಅಳವಡಿಸುವ ನಿಯಮವನ್ನು ಹಿಂದಕ್ಕೆ ಪಡೆಯುವಂತೆ ಆಗ್ರಹಿಸಿ ತಾಲೂಕು ಜ್ಯುವೆಲರಿ ವರ್ಕರ್ಸ್ ಆ್ಯಂಡ್ ಮರ್ಚಂಟ್ಸ್ ಅಸೋಸಿಯೇಷನ್ ವತಿಯಿಂದ ಸೋಮವಾರ ತಹಸೀಲ್ದಾರ ಶ್ರೀಕೃಷ್ಣ ಕಾಮ್ಕರ್ ಅವರ ಮೂಲಕ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.


    ಸಂಘದ ಸಂಸ್ಥಾಪಕರು ಹಾಗೂ ಜಿಲ್ಲಾ ಸಮಿತಿ ಸದಸ್ಯ ಅರವಿಂದ ವೆರ್ಣೆಕರ್ ಮಾತನಾಡಿ, ಹಾಲ್ ಮಾರ್ಕ್ ಬಗ್ಗೆ ವಿರೋಧವಿಲ್ಲ. ಆದರೆ ಎಚ್.ಯು.ಐ.ಡಿ ಕಾಯ್ದೆಯ ಕುರಿತು ವಿರೋಧವಿದೆ. ಈ ನಿಯಮದಲ್ಲಿ ಹಲವು ತಾಂತ್ರಿಕ ಸಮಸ್ಯೆಗಳಿವೆ. ಗ್ರಾಹಕರ ಹಿತಾಸಕ್ತಿಗೆ ಈ ಕಾಯ್ದೆ ವಿರುದ್ಧವಾಗಿದೆ. ಇದನ್ನು ಜಾರಿಗೆ ತಂದಲ್ಲಿ ಆಭರಣ ಉದ್ಯಮಕ್ಕೆ ಭಾರಿ ಹಿನ್ನೆಡೆ ಉಂಟಾಗಲಿದೆ. ಈ ತಾಂತ್ರಿಕ ವ್ಯವಸ್ಥೆಯಿಂದ ಸಣ್ಣ ಆಭರಣ ವ್ಯಾಪಾರಸ್ಥರಿಗೆ ತೊಂದರೆಯಾಗಲಿದೆ. ಗ್ರಾಹಕರಿಗೆ ಗುಣಮಟ್ಟದ ಆಭರಣ ನೀಡಲು ಕಷ್ಟವಾಗಲಿದೆ, ಸಮಯಕ್ಕೆ ಸರಿಯಾಗಿ ಆಭರಣ ನೀಡಲು ಸಾಧ್ಯವಾಗುವುದಿಲ್ಲ. ಇಷ್ಟೇ ಅಲ್ಲದೇ ಇನ್ನೂ ಹಲವು ರೀತಿಯ ಸಮಸ್ಯೆಗಳು ಈ ನಿಯಮದಿಂದ ಉಂಟಾಗಲಿದೆ. ಈ ನಿಯಮವನ್ನು ಹಿಂದಕ್ಕೆ ಪಡೆಯುವ ಮೂಲಕ ಸಣ್ಣ ಮತ್ತು ಮಧ್ಯಮ ಆಭರಣ ವರ್ತಕರು ಹಾಗೂ ಅವರ ಅವಲಂಬಿತರ ಬದುಕನ್ನು ಉಳಿಸುವಂತೆ ಆಗ್ರಹಿಸಿದರು.

    300x250 AD


    ಸಂಘದ ಅಧ್ಯಕ್ಷ ಸುರೇಶ ರೇವಣಕರ್, ಉಪಾಧ್ಯಕ್ಷರಾದ ರಾಜೇಂದ್ರ ಶೇಟ್, ರಾಮಕೃಷ್ಣ ಅಣ್ವೆಕರ್, ಜಿಲ್ಲಾ ಸಮಿತಿ ಸದಸ್ಯ ಪರಶುರಾಮ ಕುರ್ಡೆಕರ್, ಸದಸ್ಯರಾದ ಗಣಪತಿ ಶೇಟ್, ಪ್ರಕಾಶ ಶೇಟ್, ಗಿರೀಶ ರೇವಣಕರ್, ಅಶೋಕ ಶೇಟ್, ಸುಬ್ರಾಯ ಶೇಟ್ ಮುಂತಾದವರಿದ್ದರು

    Share This
    300x250 AD
    300x250 AD
    300x250 AD
    Leaderboard Ad
    Back to top