• Slide
    Slide
    Slide
    previous arrow
    next arrow
  • ಆರೋಗ್ಯಕ್ಕೆ ಒಳ್ಳೆಯದು ನಿಂಬೆ ಹಣ್ಣಿನ ಸಾಂಬಾರ್

    300x250 AD

    ಅಡುಗೆ ಮನೆ: ಬೇಕಾಗುವ ಸಾಮಗ್ರಿ: ನಿಂಬೆ – 5, ಶುಂಠಿ – ಒಂದು ಇಂಚಷ್ಟು, ಬೆಲ್ಲ – 2 ಟೀ ಸ್ಪೂನ್, ಕರಿಮೆಣಸು – 1 ಟೀ ಸ್ಪೂನ್, ರುಚಿಗೆ ತಕ್ಕಷ್ಟು ಉಪ್ಪು, ಎಣ್ಣೆ – 2 ಟೀ ಸ್ಪೂನ್, ಒಣಮೆಣಸಿನಕಾಯಿ – 1, ಸಾಸಿವೆ – ಸ್ವಲ್ಪ ಬೆಳ್ಳುಳ್ಳಿ ಎಸಳು – 2, ಕರಿಬೇವುಸೊಪ್ಪು.

    300x250 AD

    ಮಾಡುವ ವಿಧಾನ: ಮೊದಲಿಗೆ ಒಂದು ಪಾತ್ರೆಯಲ್ಲಿ ಸುಮಾರು 1 ಲೀ.ನಷ್ಟು ನೀರು ತೆಗೆದುಕೊಂಡು ರುಚಿಗೆ ತಕ್ಕಷ್ಟು ಉಪ್ಪು ಹಾಗೂ ಬೆಲ್ಲ ಹಾಕಿ ಚೆನ್ನಾಗಿ ಕುದಿಸಬೇಕು. ಕರಿಮೆಣಸನ್ನು ಪುಡಿ ಮಾಡಿಕೊಳ್ಳಬೇಕು. ಜೊತೆಗೆ ಶುಂಠಿಯನ್ನು ಕೂಡ ಚೆನ್ನಾಗಿ ಪುಡಿ ಮಾಡಿ ಕುದಿಯುತ್ತಿರುವ ನೀರಿಗೆ ಸೇರಿಸಬೇಕು. ನಂತರ ನಿಂಬೆಹುಳಿಯ ರಸ ಹಿಂಡಿ ಚೆನ್ನಾಗಿ ಕುದಿದ ರಸಕ್ಕೆ ಸೇರಿಸಿ ಕೂಡಲೇ ಸ್ವೌವ್’ನಿಂದ ಇಳಿಸಬೇಕು. ನಂತರ ಒಗ್ಗರಣೆಗೆ ಸ್ವಲ್ಪ ಎಣ್ಣೆ ಹಾಕಿ ಜಜ್ಜಿದ ಬೆಳ್ಳುಳ್ಳಿ, 1 ಒಣಮೆಣಸಿನಕಾಯಿ, ಸಾಸಿವೆ ಹಾಕಿ, ಇದು ಸಿಡಿದ ಕೂಡಲೇ ಕರಿಬೇವು ಸೊಪ್ಪು ಹಾಕಿ, ಈ ಒಗರಣೆಯನ್ನು ಸಾಂಬಾರಿಗೆ ಸೇರಿಸಿದರೆ ನಿಂಬೆ ಸಾಂಬಾರ್ ರೆಡಿ.

    Share This
    300x250 AD
    300x250 AD
    300x250 AD
    Leaderboard Ad
    Back to top