ಶಿರಸಿ: ಉತ್ತರ ಕನ್ನಡ ಜಿಲ್ಲೆಯ ತಾಲೂಕಿನ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಧಾರವಾಡ, ಹಾವೇರಿ, ಗದಗ ಮತ್ತು ಉತ್ತರ ಕನ್ನಡ ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ನಿ., ಧಾರವಾಡದ ಶಿರಸಿ ಉಪವಿಭಾಗದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಒಕ್ಕೂಟದ ಕಚೇರಿ ಹಾಗೂ ಶೀಥಲ ಕೇಂದ್ರದ ಸಿಬ್ಬಂಧಿಗಳಿಗೆ ತಾಲೂಕಿನ ಎಲ್ಲಾ ಹಾಲು ಉತ್ಪಾದಕರ ಸಹಕಾರಿ ಸಂಘಗಳ ಮುಖ್ಯ ಕಾರ್ಯನಿರ್ವಾಹಕರು, ಹಾಲು ಪರೀಕ್ಷಕರು, ಸಹಾಯಕರುಗಳಿಗೆ, ಕೃತಕ ಗರ್ಭಧಾರಣಾ ಕಾರ್ಯಕರ್ತರಿಗೆ, ಒಕ್ಕೂಟದ ನಂದಿನಿ ಉತ್ಪನ್ನಗಳ ವಿತರಕರಿಗೆ ಮತ್ತು ಹಾಲಿನ ಮಾರ್ಗದ ಚಾಲಕರುಗಳಿಗೆ ಕೋವಿಡ್-19 2ನೇ ಸುತ್ತಿನ ಲಸಿಕೆಯನ್ನು ಆ.25 ಬುಧವಾರ ಉಚಿತವಾಗಿ ನೀಡಲಾಗುವುದು ಎಂದು ನಿರ್ದೇಶಕ ಸುರೇಶ್ಚಂದ್ರ ಹೆಗಡೆ ಕೆಶಿನ್ಮನೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಈ ಮೊದಲು ಮೇ.31 ರಂದು ತಾಲೂಕಿನಲ್ಲಿ ಕಾರ್ಯನಿರ್ವಹಿಸುತ್ತಿರುವ ಒಕ್ಕೂಟದ ನೌಕರರಿಗೆ ಹಾಗೂ ತಾಲೂಕಿನ ಎಲ್ಲ ಹಾಲು ಸಂಘಗಳ ಸಿಬ್ಬಂದಿಗಳಿಗೆ ಆದ್ಯತಾ ವಲಯದ ಅಡಿಯಲ್ಲಿ ಕೋವಿಡ್-19 1ನೇ ಸುತ್ತಿನ ಲಸಿಕೆಯನ್ನು ವಿತರಿಸಲಾಗಿದ್ದು, ಒಟ್ಟಾರೆ ತಾಲೂಕಿನ ಹಾಲು ಉತ್ಪಾದನಾವಲಯದಲ್ಲಿ ಕಾರ್ಯ ನಿರ್ವಹಿಸುವವರು ಸುಮಾರು 350 ಕ್ಕೂ ಹೆಚ್ಚು ಜನರು ಲಸಿಕೆ ಪಡೆಯುವವರು ಇದ್ದು, ಎಲ್ಲರೂ ತಪ್ಪದೇ ಕೋವಿಡ್-19 2ನೇ ಸುತ್ತಿನ ಲಸಿಕೆಯ ಪ್ರಯೋಜನವನ್ನು ಪಡೆಯಬೇಕು ಎಂದು ಧಾರವಾಡ, ಹಾವೇರಿ, ಗದಗ ಮತ್ತು ಉತ್ತರ ಕನ್ನಡ ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ನಿ., ಧಾರವಾಡದ ನಿರ್ದೇಶಕ ಸುರೇಶ್ಚಂದ್ರ ಹೆಗಡೆ ಕೆಶಿನ್ಮನೆ ತಿಳಿಸಿದ್ದಾರೆ.
ಒಕ್ಕೂಟದ ಉಳಿದ ತಾಲೂಕಿನ ಎಲ್ಲ ಹಾಲು ಸಂಘಗಳು ತಮ್ಮ ತಾಲೂಕಾ ಆಸ್ಪತ್ರೆಗಳನ್ನು ಸಂಪರ್ಕಿಸಿ ಯಾವ ದಿನಂದಂದು ಲಸಿಕೆಯ ಲಭ್ಯವಿದೆ ಎಂದು ಮಾಹಿತಿಯನ್ನು ಪಡೆದು ಆಯಾ ದಿನಗಳಂದು ತಮ್ಮ ಸಂಘದ ದೃಢೀಕರಣ ಪತ್ರದೊಂದಿಗೆ ತಾಲೂಕಾ ಆಸ್ಪತ್ರೆಗಳಿಗೆ ತೆರಳಿ ಕೋವಿಡ್-19 2ನೇ ಸುತ್ತಿನ ಲಸಿಕೆಯನ್ನುಪಡೆಯಬೇಕು ಹಾಗೂ ನಮ್ಮ ಮನವಿಗೆ ಸ್ಪಂದಿಸಿ ನಮ್ಮ ಜಿಲ್ಲೆಯ ಹಾಲು ಉತ್ಪದಾನಾ ವಲಯವನ್ನು ಆದ್ಯತಾ ಗುಂಪಿನಲ್ಲಿ ಪರಿಗಣಿಸಿದ್ದಕ್ಕಾಗಿ ಮತ್ತು ಕೋವಿಡ್-19 2ನೇ ಸುತ್ತಿನ ಲಸಿಕೆಯನ್ನು ಹಾಲು ಉತ್ಪಾದನಾ ವಲಯಕ್ಕೆ ನೀಡುತ್ತಿರುವುದಕ್ಕಾಗಿ ಜಿಲ್ಲಾಡಳಿತಕ್ಕೆ, ಜಿಲ್ಲಾ ಆರೋಗ್ಯಾಧಿಕಾರಿಳಿಗೆ ಹಾಗೂ ತಾಲೂಕಾ ಆರೋಗ್ಯಾಧಿಕಾರಿಗಳಿಗೆ ಹೃತ್ಪೂರ್ವಕ ಧನ್ಯವಾದಗಳನ್ನು ಒಕ್ಕೂಟದ ನಿರ್ದೇಶಕ ಸುರೇಶ್ಚಂದ್ರ ಕೆಶಿನ್ಮನೆ ಅರ್ಪಿಸಿದ್ದಾರೆ.