ಶಿರಸಿ: ಸೋಮವಾರ ನಗರದ ಅಂಬೇಡ್ಕರ ಭವನದಲ್ಲಿ ಕೊವಿಡ್ ಲಸಿಕೆ ನೀಡಲಾಗುತ್ತಿದ್ದು, ಸಾರ್ವಜನಿಕರು ಸರತಿ ಸಾಲಿನಲ್ಲಿ ನಿಂತು ಲಸಿಕೆ ತೆಗೆದುಕೊಂಡರು.
ನಗರದ ಯಲ್ಲಾಪುರ ರಾಜ್ಯ ಹೆದ್ದಾರಿಗೆ ಹೊಂದಿಕೊಂಡಿರುವ ಅಂಬೇಡ್ಕರ ಭವನದಿಂದ ಆರಂಭವಾದ ಸರತಿ ಸಾಲು, ರಸ್ತೆಯವರೆಗೂ ವ್ಯಾಪಿಸಿದ್ದು, ಜನರು ಲಸಿಕೆ ಪಡೆಯಲು ಕಾತರರಾಗಿದ್ದರು.
ಕೋವಿಶೀಲ್ಡ ಮೊದಲ ಹಾಗು ಎರಡನೇ ಡೋಸ್, ಕೋವ್ಯಾಕ್ಸಿನ್ ಡೋಸ್ ಪಡೆಯುವವರಿಗೆ ಹಾಗು 18 ವರ್ಷ ಮೇಲ್ಪಟ್ಟವರಿಗೆ ಕೊವಿಡ್ ಲಸಿಕೆ ನೀಡಲಾಗಿದೆ.