ಕುಮಟಾ: ಮಹಿಳೆಯರಿಗೆ ಅರಿಶಿನ ಕುಂಕುಮ, ರಕ್ತನೀಡಿ ಒಂದು ಜೀವ ಉಳಿಸಿ ತಂಡದ ರಕ್ತದಾನಿಗಳು ಹಾಗೂ ದಯಾನಿಲಯ ವಸತಿ ಶಾಲೆ ವಿದ್ಯಾರ್ಥಿಗಳಿಗೆ ರಾಖಿ ಕಟ್ಟುವ ಮೂಲಕ ಇನ್ಸ್ಟೈಲ್ ಬ್ಯೂಟಿ ಪಾರ್ಲರ್ ವತಿಯಿಂದ ರಕ್ಷಾ ಬಂಧನ ಆಚರಿಸಲಾಯಿತು.
ಪಟ್ಟಣದ ದಯಾನಿಲಯ ವಸತಿಶಾಲೆಯಲ್ಲಿ ರಕ್ಷಾ ಬಂಧನ ಆಚರಿಸಿ ಪರಸ್ಪರ ಸಿಹಿ ಹಂಚಿ ಸಂಭ್ರಮಿಸಿದರು. ಈ ವೇಳೆ ಮಾತನಾಡಿದ ರಾಷ್ಟ್ರೀಯ ಸ್ವಯಂ ಸೇವಕ ಸಂಘ ನಗರ ಘಟಕದ ಅದ್ಯಕ್ಷ ಅಶೋಕ ಬಾಳೇರಿ ಮಾತನಾಡಿ ರಾಖಿ ಎಂಬುದು ಕೇವಲ ಎರಡು ಎಳೆಯ ದಾರವಲ್ಲ.ಬದಲಾಗಿ ಅಣ್ಣನ ಮಾನ ಪ್ರಾಣ ಕಾಪಾಡುವ ಸರಪಳಿ. ಅಣ್ಣ ತನ್ನ ತಂಗಿಯನ್ನು ಹರಸಿ ರಕ್ಷೆ ನೀಡುವ ಹಬ್ಬ ರಕ್ಷಾ ಬಂಧನ.ಇದು ಅಣ್ಣ ತಂಗಿಯರ ಬಾಂಧವ್ಯ ಬೆಸೆಯುವ ಹಬ್ಬ ಎಂದರು.
ಈ ವೇಳೆ ಇಸ್ಟೈಲ್ ಬ್ಯೂಟಿ ಪಾರ್ಲರ್ ನ ಮುಖ್ಯಸ್ತೆ ಧನುಶ್ರೀ ಬಾಳೇರಿ, ರಕ್ತನೀಡಿ ಜೀವ ಉಳಿಸಿ ತಂಡದ ಶ್ರೀಧರ ಕುಮಟಾಕರ್, ಪಾಂಡುರಂಗ ಶಾನಭಾಗ, ಸಚಿನ್ ನಾಯ್ಕ, ದಯಾನಿಲಯದ ಶಿಕ್ಷಕರಾದ ಜಯಾ, ನಿರ್ಮಲಾ ,ನಾಗರತ್ನ ಹಾಗೂ ವಿಧ್ಯಾರ್ಥಿಗಳು ಇದ್ದರು.