ಕುಮಟಾ: ಯುವಾ ಬ್ರಿಗೇಡ್ ಕುಮಟಾ ಘಟಕದ ವತಿಯಿಂದ ಚಂದಾವರದ ತೆಬರಿ ಹಳ್ಳಕ್ಕೆ ತಾತ್ಕಾಲಿಕ ತಡೆಗೋಡೆಯನ್ನು ನಿರ್ಮಾಣ ಮಾಡಿದರು.
ಚಂದಾವರದಿಂದ ಶೇಡಿಕುಳಿ ಮಾರ್ಗವಾಗಿ ಸಂಚರಿಸುವ ರಸ್ತೆಯಲ್ಲಿ ಸಿಗುವ ತೆಬರಿ ಹಳ್ಳದ ಸೇತುವೆಗೆ ಯಾವುದೇ ತಡೆಗೋಡೆ ಇಲ್ಲದೆ ಅನೇಕ ಅಪಘಾತಗಳಾಗಿದ್ದು, ಜೊತೆಗೆ ಸಾರ್ವಜನಿಕರು ರಾತ್ರಿ ವೇಳೆ ಹಳ್ಳದಲ್ಲಿ ಬೀಳುವ ಸಾದ್ಯತೆ ಹೆಚ್ಚಿದೆ.ಸೇತುವೆ ಪಕ್ಕದಲ್ಲಿ ಯಾವುದೇ ತಡೆಗೋಡೆ ಇಲ್ಲದೇ ಇರುವುದು ಸಣ್ಣ ಪುಟ್ಟ ವಾಹನ ಸವಾರರಿಗೂ ಸಮಸ್ಯೆಯಾಗಲಿದೆ ಎಂಬುದನ್ನು ಮನಗಂಡ ಯುವಾಬ್ರಿಗೇಡ್ ತಂಡ ದಾನಿಗಳಾದ ಅಜಿತ್ ಭಟ್,ಸಣ್ಣಪ್ಪು ನಾಯ್ಕ ಇವರ ನೆರವಿನಿಂದ ಸೇತುವೆ ಪಕ್ಕದಲ್ಲಿ ಸಿಮೆಂಟ್, ಹಾಗೂ ಅಡಿಕೆ ಮರದ ದಿಮ್ಮಿಗಳನ್ನು ಬಳಸಿ ತಾತ್ಕಾಲಿಕವಾಗಿ ತಡೆಗೋಡೆ ನಿರ್ಮಿಸಿದರು.
ಯುವ ಬ್ರಿಗೇಡ್ ತಾಲೂಕಾ ಸಂಚಾಲಕರಾದ ಸತೀಶ ಪಟಗಾರ, ಅಣ್ಣಪ್ಪ ನಾಯ್ಕ, ಮಾರುತಿ ಮಡಿವಾಳ, ಗಣಪತಿ, ಗಿರೀಶ, ಅಮಿತ್, ಪ್ರಕಾಶ, ಬಬ್ಲು, ಮಂಜುನಾಥ, ರವೀಶ, ಗೌರೀಶ, ವಿಷ್ಣು, ಕಿಶೋರ್, ರಾಘವೇಂದ್ರ, ಸುದೀಶ, ಶ್ರವಣ, ಶಶಾಂಕ, ದೀಪಾ ಕೊಡಿಯಾ ಇದ್ದರು.